ಉಡುಪಿ ; ಜಿ .ಎಸ್.ಬಿ ಸಮಾಜ ಶ್ರೀ ರಾಮ ಮಂದಿರ, ಮಲ್ಪೆ ಶ್ರೀ ರಾಮ ದೇವರ ಪ್ರತಿಷ್ಠಾಪನೆ , ಶ್ರೀ ಹನುಮ ದೇವರ ಪ್ರತಿಷ್ಠೆ ಗೊಂಡು 25 ವರ್ಷದ ರಜತ ಮೊಹೋತ್ಸವ ಆಚರಣೆ , ಹಾಗೂ ಶ್ರೀ ಹನುಮ ಜಯಂತಿ ಮಹೋತ್ಸವ ಆಚರಣೆ ಶನಿ ವಾರ ವೈಭವದಿಂದ ನೆಡೆಯಿತು ಶ್ರೀ ಶ್ರೀ ಹನುಮ ಜಯಂತಿ ಅಂಗವಾಗಿ ಶ್ರೀದೇವರಿಗೆ ವಿಶೇಷ ಅಲಂಕಾರ , ಹಾಗೂ ಶ್ರೀಮತಿ ಸೌಮ್ಯ ಕಿಣಿ ಕಲ್ಯಾಣಪುರ ಇವರಿಂದ ಭಜನಾ ಕಾರ್ಯಕ್ರಮ ನೆಡೆಯಿತು , ಹಾರ್ಮೋನಿಯಂ ನಲ್ಲಿ ರಾಮಕೃಷ್ಣ ಕಿಣೆ ತಬಲಾದಲ್ಲಿ ಗುರುದತ್ತ ನಾಯಕ್ ಸಹಕರಿಸಿದರು , ದೇವಳದ ವತಿಯಿಂದ ಕಲಾವಿದರನ್ನು ಶ್ರೀದೇವರ ಪ್ರಸಾದ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶ್ರೀ ರಾಮ ಮಂದಿರದ ಅಧ್ಯಕ್ಷರಾದ ಗೋಕುಲ್ ದಾಸ್ ಪೈ , ಅರ್ಚಕರಾದ ಶೈಲೇಶ್ ಭಟ್ , ಜಿ ಎಸ್ ಬಿ ಮಹಿಳಾ ಮಂಡಳಿ ಅಧ್ಯಕ್ಷ ಶಾಲಿನಿ ಪೈ, ಎಮ್ ದೇವರಾಯ ಭಟ್ , ವಿ ಅನಂತ್ ಕಾಮತ್ , ಸುದೀರ್ ಶೆಣೈ, ಅನಿಲ್ ಕಾಮತ್ ಹಾಗೂ ನೂರಾರು ಸಮಾಜಭಾಂದವರು ಉಪಸ್ಥರಿದ್ದರು.
ಜಿ .ಎಸ್.ಬಿ ಸಮಾಜ ಶ್ರೀ ರಾಮ ಮಂದಿರ, ಮಲ್ಪೆ ; ಶ್ರೀ ಹನುಮ ಜಯಂತಿ ಮಹೋತ್ಸವ
RELATED ARTICLES