ಎ.18ಕ್ಕೆ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಉದ್ಘಾಟನೆ

0
166

ಕಾಸರಗೋಡು : ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಸ್ಥಾಪಕ ಸಂಚಾಲಕತ್ವದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭವು ಎ.18ರಂದು ಅಪರಾಹ್ನ 2ರಿಂದ ಕಿನ್ನಿಗೋಳಿಯ ಯುಗಪುರುಷ ಸಭಾಂಗಣದಲ್ಲಿ ನಡೆಯಲಿದೆ. ಘಟಕವನ್ನು ಪ್ರದೀಪ್ ಕುಮಾರ ಕಲ್ಕೂರಾ ಉದ್ಘಾಟಿಸುವರು. ಕೊಳಚಪ್ಪು ಸತ್ಯವತಿ ಭಟ್ ದೀಪ ಪ್ರಜ್ವಲನೆ ಮಾಡುವರು. ಡಾ. ಶಾಂತಾ ಪುತ್ತೂರು ಪ್ರಾಸ್ತಾವಿಕವಾಗಿ ಮಾತನಾಡುವರು. ಘಟಕದ ಅಧ್ಯಕ್ಷ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಅನಿತಾ ಶೆಣೈ, ಪಮ್ಮಿ ಕೊಡಿಯಾಲ್ ಬೈಲ್, ಪಿ ವಿ ಪ್ರದೀಪ್ ಕುಮಾರ್, ಅಪೂರ್ವ ಕಾರಂತ, ಉಷಾ ಶಶಿಧರ. ಲಕ್ಷ್ಮಿ ಪೆರ್ಮುದೆ, ರೇಖಾ ಸುದೇಶ್ ರಾವ್, ಅಕ್ಷತಾ ನಾಗನಕಜೆ, ವಸಂತ ಕೆರೆಮನೆ ಭಾಗವಹಿಸುವರು. ಕಾರ್ಯಕ್ರಮದಲ್ಲಿ ಕಾಸರಗೋಡಿನ ಕನ್ನಡ ಭವನ ಕೇಂದ್ರ ಸಮಿತಿಯ ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ-2025ನ್ನು ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ ಕಲ್ಕೂರ, ಕ್ಯಾಪ್ಟನ್ ಗಣೇಶ ಕಾರ್ಣಿಕ್, ಶ್ರೀಪತಿ ಭಟ್ ಮೂಡುಬಿದಿರೆ, ಭುವನಾಭಿರಾಮ ಉಡುಪರಿಗೆ ಪ್ರದಾನ ಮಾಡಲಾಗುವುದು. ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಚುಟುಕು ರಚನಾ ಸ್ಪರ್ಧೆಯ ವಿಜೇತರಾದ ನಿರ್ಮಲಾ ಸುರತ್ಕಲ್, ಗೀತಾ ಎನ್ ನರಿಕೊಂಬು, ಡಾ.ಸುಮತಿ ಪಿ, ಅಬ್ದುಲ್ ಸಮದ್ ಬಾವಾ ಹಾಗೂ ದಯಾವತಿ ಚರಂತಿಮಠ ಇವರಿಗೆ ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಕಾವ್ಯ ಪ್ರಶಸ್ತಿ-2025 ನೀಡಿ ಗೌರವಿಸಲಾಗುವುದು. ಸಮಾರಂಭದಲ್ಲಿ ವಿಶ್ವನಾಥ ದೊಡ್ಮನೆ ಅವರ ‘ಹೊರನಾಡಿನಲ್ಲಿ ತುಳುವರು’ ಕೃತಿಯನ್ನು ಸಾಹಿತಿ ಜಯಾನಂದ ಪೆರಾಜೆ ಬಿಡುಗಡೆ ಮಾಡುವರು. ನಂತರ ಕೊಳಚಪ್ಪು ಸತ್ಯವತಿ ಭಟ್ಟರ ಅಧ್ಯಕ್ಷತೆಯಲ್ಲಿ ಚುಟುಕು ಕವಿಗೋಷ್ಠಿ ನಡೆಯಲಿದೆ. ಸುಮಾರು 24 ಮಂದಿ ಚುಟುಕು
ಕವಿಗಳು ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here