Thursday, April 24, 2025
HomeUncategorized39ನೇ ಪಳ್ಳೀರು ವಾರ್ಡಿನಲ್ಲಿ ಸೇಂಟ್ ಜೋಸೆಫ್ ನಗರ ಕಾಲೋನಿಯಲ್ಲಿ 50 ಲಕ್ಷ ವೆಚ್ಚದ ನೂತನ ಕಾಂಕ್ರೀಟ್...

39ನೇ ಪಳ್ಳೀರು ವಾರ್ಡಿನಲ್ಲಿ ಸೇಂಟ್ ಜೋಸೆಫ್ ನಗರ ಕಾಲೋನಿಯಲ್ಲಿ 50 ಲಕ್ಷ ವೆಚ್ಚದ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಳ್ಳೀರು ವಾರ್ಡಿನ ಸೇಂಟ್ ಜೋಸೆಫ್ ನಗರದಲ್ಲಿ ಬಹಳ ಕಾಂಕ್ರೀಟ್‌ ರಸ್ತೆಯ ಅವಶ್ಯಕತೆ ಬಹಳವಾಗಿದ್ದು ಅನೇಕ ವರ್ಷಗಳಿಂದ ರಸ್ತೆಗಾಗಿ ಅನುದಾನದ ಬೇಡಿಕೆಯನ್ನು ಇಟ್ಟಿದ್ದು ಸ್ಥಳೀಯರ ಬೇಡಿಕೆಯಂತೆ  ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ಅನುದಾನದಿಂದ ಕಾಂಕ್ರೀಟೀಕರಣ ರಸ್ತೆಯ ಕಾಮಗಾರಿ ನಡೆಸಿ ಇಂದು ಉದ್ಘಾಟನೆ ನಡೆಸಿದ್ದು, ಕೇವಲ 45 ದಿನಗಳಲ್ಲಿ ಈ ಕಾಮಗಾರಿ ನಡೆದಿದ್ದು ಉತ್ತಮವಾದ ರಸ್ತೆ ನಿರ್ಮಾಣ ಮಾಡುವ ಮೂಲಕ ಸ್ಥಳೀಯ ಜನರ ಬೇಡಿಕೆಯನ್ನು  ಈಡೇರಿಸಲಾಗಿದೆ ಎಂದು ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿಸೋಜಾರ್ ರವರು ತಿಳಿಸಿದರು. ಸಾರ್ವಜನಿಕ ಕೆಲಸಗಳು ಅತ್ಯಂತ ಪಾರದರ್ಶಕದ ಜೊತೆಗೆ ಸಾರ್ವಜನಿಕರು  ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಸಂತಸ ತಂದಿದೆ ಎಂದು ಸ್ಥಳೀಯವಾಗಿ ಸಾರ್ವಜನಿಕರು ಕೂಡ ಈ ರಸ್ತೆ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಭೂತ ಸೌಕರ್ಯ ಒದಗಿಸಿ ಕೊಡುವಲ್ಲಿ ಬಹಳ ಶ್ರಮ ವಹಿಸಿರುತ್ತಾರೆ ಎಂದು  ಶ್ಲಾಘಿಸಿದರು.

    ಈ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದ ಸೈಂಟ್‌  ಜೋಸೆಫ್ ಸೆಮಿನರಿ ಚರ್ಚಿನ ಧರ್ಮಗುರುಗಳಾದ ರೆವೆರೆಂಡ್‌  ಫಾದರ್ ಮ್ಯಾಕ್ಸಿಮ್‌ರವರು ಮಾತನಾಡಿ ಬಹಳ ಉತ್ತಮವಾದ ಕಾಮಗಾರಿ ಈ ಕಾಮಗಾರಿಯ ಅವಶ್ಯಕತೆ ಕಳೆದ ನಾಲ್ಕು ವರ್ಷಗಳಿಂದ ಬೇಡಿಕೆ ಇಟ್ಟಿದ್ದು ಈ ಬೇಡಿಕೆಯನ್ನು ಈಡೇರಿಸಿದ ವಿಧಾನ ಪರಿಷತ್ ಶಾಸಕರಾದ ಅಭಿನಂದನೆಗಳು ಮತ್ತು ರಾಜ್ಯ ಸರ್ಕಾರಕ್ಕೂ ಅಭಿನಂದನೆಯನ್ನು ತಿಳಿಸಿದರು. ಈ ಸಮಾರಂಭದಲ್ಲಿ ಮಾಜಿ ಮೇಯರ್  ಜೆಸಿಂತಾ ವಿಜಯ ಆಲ್ಪ್ರೇಡ್‌ ಸ್ವಾಗತಿಸಿದರು ಸ್ಥಳೀಯರು ಅನೇಕರು ಶುಭ ಹಾರೈಕೆಯನ್ನು ಮಾಡಿದರು ಈ ಸಂದರ್ಭದಲ್ಲಿ ನೀತು , ಭಾಸ್ಕರ್ ರಾವ್ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular