ವಿಕಾಸ ಜನಸೇವಾ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ| ಬಿ ಆರ್‌ ಅಂಬೇಡ್ಕರ್‌ ಜಯಂತಿ ಆಚರಣೆ.

0
219

ಕಾರ್ಕಳ : ಶತಶತಮಾನದಿಂದಲೂ ಭಾರತದಲ್ಲಿದ್ದ ಅಸ್ಪೃಸ್ಯತೆಯ ವ್ಯವಸ್ಥೆಯನ್ನು ಮೀರಿ ವಿದ್ಯಾಭ್ಯಾಸವನ್ನು ಪಡೆದು ತಮ್ಮ ಬದುಕು ರೂಪಿಸಿಕೊಳ್ಳುವುದರೊಂದಿಗೆ ಭಾರತೀಯರ ಸುಭದ್ರ ಜೀವನಕ್ಕಾಗಿ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ ಸಂವಿಧಾನ ಶಿಲ್ಪಿ ಡಾ. ಬಿ. ಆರ್.‌ ಅಂಬೇಡ್ಕರ್‌ ಅವರ 134ನೇ ಜನ್ಮ ದಿನಾಚರಣೆಯನ್ನು ಕಾರ್ಕಳ ಶಾಸಕರ ʼವಿಕಾಸʼ ಜನಸೇವಾ ಕಚೇರಿಯಲ್ಲಿ ಆಚರಿಸಲಾಯಿತು. ಅಂಬೇಡ್ಕರ್‌ ರವರ ಭಾವಚಿತ್ರಕ್ಕೆ ಮಾನ್ಯ ಕಾರ್ಕಳ ಶಾಸಕರು,ಮಾಜಿ ಸಚಿವರಾದ ಶ್ರೀ ವಿ ಸುನಿಲ್‌ ಕುಮಾರ್‌ ರವರು ಪುಷ್ಪಾರ್ಚನೆ ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ಕ್ಷೇತ್ರಾಧ್ಯಕ್ಷರಾದ ನವೀನ್‌ ನಾಯಕ್, ಜಿಲ್ಲಾ ಉಪಾಧ್ಯಕ್ಷರುಗಳಾದ ಮಹಾವೀರ ಹೆಗ್ಡೆ, ರಾಜ್ಯ ಯುವಮೋರ್ಚಾ ಕಾರ್ಯದರ್ಶಿ ವಿಖ್ಯಾತ್‌ಶೆಟ್ಟಿ, ಪುರಸಭಾ ಸದಸ್ಯರುಗಳು ಹಾಗೂ ನಗರ ಬಿಜೆಪಿ ಪ್ರಮುಖರಾದ ಅಶೋಕ್‌ ಸುವರ್ಣ, ಯೋಗೀಶ್‌ ನಾಯಕ್‌,ಅವಿನಾಶ್‌ ಶೆಟ್ಟಿ, ದಯಾನಂದ ಹೆಗ್ಡೆ ಕಡ್ತಲ, ನಗರ ಬಿಜೆಪಿ ಅದ್ಯಕ್ಷರಾದ ನಿರಂಜನ್‌ ಜೈನ್, ಹಾಗೂ ಪಕ್ಷದ ಪದಾಧಿಕಾರಿಗಳು ಜೊತೆಗೆ ಕೃಷ್ಣ ಮೂಡಬಿದಿರೆ, ಅಶೋಕ್‌ ಕುಂಟಲ್ಪಾಡಿ ಮತ್ತು ಇತರ ಪ್ರಮುಖರು ಉಪಸ್ಥಿತರಿದ್ದರು.                       

LEAVE A REPLY

Please enter your comment!
Please enter your name here