ಮಲ್ಪೆ; ಜಿ .ಎಸ್.ಬಿ ಸಮಾಜ ಶ್ರೀ ರಾಮ ಮಂದಿರ, ಮಲ್ಪೆ ಶ್ರೀದೇವರ ಸನ್ನಿಧಿಯಲ್ಲಿ ಸೋಮವಾರದಂದು ಶ್ರೀಕಾಶೀ ಮಠಾಧೀಶರಾದ ಶ್ರೀಮದ್ ಸುಧೀಂದ್ರ ತೀರ್ಥ ಶ್ರೀಪಾದಂಗಳವರ 100 ನೇ ಜನ್ಮನಕ್ಷತ್ರದ ದಿನದ ಸ್ವಾತಿ ನಕ್ಷತ್ರ ದಂದು ಸದ್ಗುರು ಪರಮಪೂಜ್ಯ ಶ್ರೀಪಾದರ ಜನ್ಮಶತಾಭ್ಧಿ ಆರಾಧನಾ ಮೊಹೋತ್ಸವ ವೈಭವದಿಂದ ನಡೆಯಿತು.
ಶ್ರೀದೇವರಿಗೆ ವಿಶೇಷ ಅಲಂಕಾರ , ವಿಶೇಷ ಭಜನಾ ಕಾರ್ಯಕ್ರಮ , ಶ್ರೀಮದ್ ಸುಧೀಂದ್ರ ತೀರ್ಥ ಶ್ರೀಪಾದಂಗಳವರ ಭಾವ ಚಿತ್ರ ಮೆರವಣಿಗೆ ಜರಗಿತು , ಶ್ರೀ ಸುಧೀಂದ್ರ ವಾಣಿ ಪಠಣೆ , ಗುರು ಸ್ಮರಣಿ , ಕಾಣಿಕೆ ಸಮರ್ಪಣೆ ಜರಗಿತು , ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು.
ಶ್ರೀ ದೇವರ ಸನ್ನಿಧಿಯಲ್ಲಿ ಮಂದಿರದ ಅರ್ಚಕರಾದ ಅರ್ಚಕರಾದ ಶೈಲೇಶ್ ಭಟ್ ಧಾರ್ಮಿಕ ಪೂಜಾ ವಿಧಾನಗಳನ್ನು ನೆರವೇರಿಸಿದರು.
ಶ್ರೀ ರಾಮ ಮಂದಿರದ ಅಧ್ಯಕ್ಷರಾದ ಗೋಕುಲ್ ದಾಸ್ ಪೈ , ಜಿ ಎಸ್ ಬಿ ಮಹಿಳಾ ಮಂಡಳಿ ಅಧ್ಯಕ್ಷ ಶಾಲಿನಿ ಪೈ, ಎಮ್ ದೇವರಾಯ ಭಟ್ , ವಿ ಅನಂತ್ ಕಾಮತ್ , ಸುರೇಂದ್ರ ಭಂಡಾರ್ ಕಾರ್ , ಸುದೀರ್ ಶೆಣೈ , ಅನಿಲ್ ಕಾಮತ್ , ಜಿ ಎಸ್ ಬಿ ಮಹಿಳಾ ಮಂಡಳಿ ಸದಸ್ಯರು , ಯುವಕ ಮಂಡಳಿಯ ಸದಸ್ಯರು ನೂರಾರು ಸಮಾಜಭಾಂದವರು ಉಪಸ್ಥರಿದ್ದರು.