ಪರಿಸರ ಕಾಳಜಿ ಮತ್ತು ವಿಶ್ವ ಶಾಂತಿ ಪ್ರತಿಪಾದಿಸಿದ ಮಹಾನಾಯಕ ಪೋಪ್ ಪ್ರಾನ್ಸಿಸ್: ಪ್ರೆಸ್ ಕ್ಲಬ್ ಆಧ್ಯಕ್ಷ ಪಿಬಿ ಹರೀಶ್ ರೈ  ಪೋಪ್ ಪ್ರಾನ್ಸಿಸ್ ಅವರಿಗೆ ಸಂತಾಪ

0
57

ರಾಜಕೀಯ ನಾಯಕರು ಮತ್ತು ಸಾಮಾಜಿಕ ಸುಧಾರಕರು ಹೇಳಿದ ಮಾತು ಕೇಳದವರು ಧಾರ್ಮಿಕ ನಾಯಕರ ಮಾತು ಕೇಳಿ ಸುಧಾರಣೆಗೆ ಸಮ್ಮತಿಸುತ್ತಾರೆ.
ವಿಶ್ವದ ಕ್ರೈಸ್ತ ಧರ್ಮದ ನಾಯಕರಾದರೂ ಪೋಪ್ ಪ್ರಾನ್ಸಿಸ್ ಅವರು ಶಾಂತಿ  ಸಾರಿದರು ಮತ್ತು ಪರಿಸರ ಉಳಿಸಲು ಕರೆನೀಡಿದ್ದರು ಎಂದು ಹೇಳಿದರು.

ಅವರು ಪಿಂಗಾರ ಸಂಸ್ಥೆಯ ರೇಮಂಡ್ ಡಿಕೂನಾ ತಾಕೊಡೆ ಅವರ ಮುಂದಾಳತ್ವದಲ್ಲಿ ನಡೆದ ಪೋಪ್ ಪ್ರಾನ್ಸಿಸ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣ ನೀಡಿ ಭಿಷಪ್ ಹೌಸ್ ಚರ್ಚ್ ಬಿಲ್ಡಿಂಗ್ ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

ಕಣಚೂರು ಆಯುರ್ವೇದ ಆಸ್ಪತ್ರೆಯ ವೈದ್ಯವರಿಷ್ಠಾ ದಿಕಾರಿ, ಆಯುರ್ವೇದ ಕ್ಷಾರ ವೈದ್ಯ ಡಾ ಸುರೇಶ ನೆಗಳಗುಳಿ ಮಾತನಾಡಿ ಸತ್ಯಂ ವದಾ ಧರ್ಮ ಚರ ಹಾಗೆ ಸುಭೀಕ್ಷವಾದ ಉದಾತ್ತ ದ್ಯೇಯಗಳ ಧರ್ಮ ನಾಯಕರು ಎಲ್ಲಾ ಧರ್ಮದ ನಾಯಕರಿಗೆ ಮೇಲ್ಪಂಕ್ತಿಯನ್ನು ಹಾಕುತ್ತಾರೆ ಎಂದರು.

ಅನುಪಮ ಪತ್ರಿಕೆಯ ಪ್ರಭಂದಕರಾದ ಮಹಮ್ಮದ್ ಮೊಹಿಸಿನ್ ಮಾತನಾಡಿ ಅತೀ ಹೆಚ್ಚು ಗಟ್ಟಿ ಧ್ವನಿಯಲ್ಲಿ ಯುದ್ಧವನ್ನು ಖಂಡಿಸಿದ ಈ ಪೋಪ್ ಪ್ರಾನ್ಸಿಸ್ ನಿಜಕ್ಕೂ ನೆನಪಿಗೆ ಉಳಿಯುವರು ಎಂದರು.

ರೇಮಂಡ್ ಡಿಕೂನಾ ತಾಕೊಡೆ ಮಾತನಾಡಿ ಅಲೋಶಿಯಸ್ ಕಾಲೇಜು ಜೆಸ್ವಿತ್ ಧರ್ಮಗುರು ನಡೆಸುತ್ತಾರೆ ಅದೇ ಪಂಥಕ್ಕೆ ಪೋಪ್ ಪ್ರಾನ್ಸಿಸ್ ಕ್ರೈಸ್ತ ಧರ್ಮ ಗುರು ಮೂಲಕವಾಗಿ ಸೇರಿ ಇಡೀ ಜಗತ್ತಿನಲ್ಲಿ ಎಲ್ಲಾ ಪಂಥದ ಕ್ರೈಸ್ತ ಧರ್ಮದ ಜನರಿಗೆ ಮುಖಂಡರು ಆದರು.ಇದು ದೇವತಾ ಭಾಗ್ಯ.ಇವರ ಅಗಲಿಕೆಯ ನೋವು ಅಪಾರವಾಗಿದಡ ಎಂದು ಕಂಬನಿ ಮಿಡಿದರು.

ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇದರ ಅಧ್ಯಕ್ಷ ಕೆ ವಸಂತ ರಾವ್, ಜನರಲ್ ಇಂಜಿನಿಯರಿಂಗ್ ಅ್ಯಂಡ್ ಎಲೆಕ್ಟ್ರಿಕಲ್ಸ್ ಜಂಟಿ ಮಾಲಕರಾದ ಎಡೋಲ್ಫ ಡಿಸೋಜ, ಗೋಲ್ಡಿನ್ ಡಿಸೋಜ, ಮತ್ತು ಡೋಲ್ಫಿ ಡಿಸೋಜ ವೇದಿಕೆಯಲ್ಲಿ ಇದ್ದರು.

ರಿಯಾನಾ ಡಿಕೂನಾ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here