ಮೂಡಬಿದಿರೆ: ಏ 27 ರವಿವಾರ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಕಡಂದಲೆ- ಪಾಲಡ್ಕದಲ್ಲಿ ನಡೆದ ಮಾಸಿಕ ಸಭೆಯಲ್ಲಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ನಿ. ಬೆಳ್ತಂಗಡಿ ಇದರ 26ನೇ ನೂತನ ಶಾಖೆಯು ಮೂಡಬಿದಿರೆ ಇಲ್ಲಿ ದಿನಾಂಕ 17-05-2025 ರಂದು ಉದ್ಘಾಟನೆಗೊಳ್ಳಲಿದ್ದು ಇದರ ನಿರ್ದೇಶಕರಾದ ಶ್ರೀ ಜಗದೀಶ್ಚಂದ್ರ ಡಿ. ಕೆ ಮಾಹಿತಿ ನೀಡಿದರು.

ಸಭೆಯಲ್ಲಿ ನೂತನ ಶಾಖೆಯ ಸಿಬ್ಬಂದಿಗಳು ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಕಡಂದಲೆ- ಪಾಲಡ್ಕ ಇದರ ಅಧ್ಯಕ್ಷರಾದ ಲೀಲಾದರ ಪೂಜಾರಿ ಮತ್ತು ಸಂಘದ ಮಾಜಿ ಅಧ್ಯಕ್ಷರಾದ ನಾರಾಯಣ ಪೂಜಾರಿ, ಸೇವಾದಾಳ ಮಾಜಿ ಅಧ್ಯಕ್ಷರು ಉದಯ ಪೂಜಾರಿ, ಮಹಿಳಾ ಘಟಕ ಅಧ್ಯಕ್ಷರಾದ ಸೌಮ್ಯ ಗಣೇಶ್, ಭಜನಾ ಮಂಡಳಿ ಅಧ್ಯಕ್ಷರಾದ ಶಿವರಾಮ್, ಹಾಗೂ ಪಾವನ ಸಂತೋಷ್,ಸ್ಥಳೀಯ ಪತ್ರಕರ್ತರಾದ ಜಗದೀಶ್ ಪೂಜಾರಿ ಪೂಪಾಡಿಕಲ್ಲು ಹಾಗೂ ಸಂಘದ ಸದಸ್ಯರು ಹಾಜರಿದ್ದರು.
