ಬೈಂದೂರಿನಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರ ಪುನಶ್ಚೇತನ ಕೇಂದ್ರ ಸೇವಾಧಾಮಕ್ಕೆ ಭೂಮಿ ಪೂಜೆ

0
140

ಬೈಂದೂರು: ಸಮೃದ್ಧ ಬೈಂದೂರು ಪರಿಕಲ್ಪನೆಯ ಸೇವಾ ಸೇತು ಯೋಜನೆಯಡಿಯಲ್ಲಿ ಸೇವಾಭಾರತಿ (ರಿ.)ಕನ್ಯಾಡಿ ಸಹಯೋಗದೊಂದಿಗೆ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ನೂತನ ಪುನಶ್ಚೇತನ ಕೇಂದ್ರ ಸೇವಾಧಾಮ ಇದರ ಭೂಮಿ ಪೂಜೆ ಕಾರ್ಯಕ್ರಮ ಏಪ್ರಿಲ್ 28 ರಂದು ಬೈಂದೂರಿನ ಪಡುವರಿ ಗ್ರಾಮದ ಹೇನಬೇರು ಇಲ್ಲಿ ನಡೆಯಿತು.

ಮಾನ್ಯ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಭೂಮಿ ಪೂಜೆಯನ್ನು ನೆರವೇರಿಸಿ ಈ ಒಂದು ಕೇಂದ್ರ ಬೈಂದೂರಿನ 37 ಮಂದಿ ದಿವ್ಯಾಂಗರ ಬಾಳಲ್ಲಿ ಆಶಾಕಿರಣವಾಗಲಿ. ರಾಜಕೀಯದ ಜೊತೆ ಜೊತೆಗೆ ಇನ್ನೊಬ್ಬರ ನೋವಿಗೆ ನಾವು ಸ್ಪಂದಿಸುವುದು ಸಹ ಮಹತ್ತರವಾದ ಕೆಲಸವಾಗಿದೆ . ಬೈಂದೂರಿನಲ್ಲಿ ಆಗುವಂತಹ ಈ ಒತ್ತಡ ಗಾಯ ನಿರ್ವಹಣೆ ಮತ್ತು ಪುನಶ್ವೇತನ ಕೇಂದ್ರವನ್ನು ಕರ್ನಾಟಕದಲ್ಲಿ 2ನೇ ಕೇಂದ್ರವನ್ನಾಗಿ ಪ್ರಾರಂಭಿಸಲಿದ್ದೇವೆ ಈ ಒಂದು ಕೆಲಸವನ್ನು ಮಾಡಲು ಬಹಳ ಸಂತೋಷ ಇದೆ ಎಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಸಮೃದ್ಧ ಜನ ಸೇವಾ ಚಾರಿಟೇಬಲ್ ಟ್ರಸ್ಟ್ ನ ಪ್ರಮುಖರಾದ ಶ್ರೀ ಬಿಎಸ್ ಸುರೇಶ್ ಶೆಟ್ಟಿ, ಬರವಾಡಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಶ್ರೀ ಸುರೇಶ್, ಶಿರೂರು ಹಿರಿಯ ವೈದ್ಯಾಧಿಕಾರಿಗಳು ಡಾ. ಕೆ ಪಿ ನಬಿಯಾರ್, ಬೈಂದೂರು ಆರೋಗ್ಯ ಭಾರತಿ ಉಪಾಧ್ಯಕ್ಷರು ಡಾ. ಎ ಎಸ್ ಉಡುಪ ಸೇವಾಧಾಮ ಸಂಸ್ಥಾಪಕರು ಶ್ರೀ ಕೆ ವಿನಾಯಕ ರಾವ್ ಮತ್ತು ಸೇವಾಭಾರತಿ ಕಾರ್ಯದರ್ಶಿ ಶ್ರೀ ಬಾಲಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here