ಮಧ್ಯ ಪ್ರದೇಶ ದ: ಮಂತ್ರ ಘೋಷಣೆ ಜಯ ಘೋಷಣೆ

0
132

ಮಧ್ಯ ಪ್ರದೇಶ ದ ಇಂದೂರ್ ಮಹಾ ನಗರದಲ್ಲಿ 30.4.2025 ರಂದು ಬೆಳಿಗ್ಗೆ 745ರಿಂದ 8.45ರ ಮದ್ಯೆ ವೃಷಭ ಲಗ್ನ ದಲ್ಲಿ ಚರ್ಯ ಶಿರೋ ಮಣಿ ಆಚಾರ್ಯ 108 ವಿಶುದ್ಧ ಸಾಗರ ಮುನಿ ರಾಜರಿಗೆ ಸಮಾಧಿಸ್ಥ ಆಚಾರ್ಯ ವಿರಾಗ ಸಾಗರ ಮುನಿ ರಾಜ ರಿಂದ ಕೊಡಲ್ಪಟ್ಟ ಅವರ ಸಂಘ ದ ಪಟ್ಟ ಪರಂಪರೆಯ ಪಟ್ಟ ಚಾರ್ಯ ಉಪಾದಿ ಆಚಾರ್ಯ ಪುಷ್ಪ ದಂತ ಸಾಗರ ರ ನೇತ್ರ ತ್ವದಲ್ಲಿ ಇತರ 10 ಆಚಾರ್ಯ ನೂರಾರು ಮುನಿ ಅಯಿ೯ಕಾ ಮಾತಾಜಿ, ಐಲಕ, ಕ್ಷುಲ್ಲಕ, ಕ್ಷಲ್ಲಿಕ ಮಾತಾಜಿ, ಭಟ್ಟಾರಕ ಸ್ವಾಮೀಜಿ ವಿಧ್ವಾoಸರ, ಗಣ್ಯರ ಸಹಸ್ರಾ ರು ಭಕ್ತ ವೃoದದ ಉಪಸ್ಥಿತಿಯಲ್ಲಿ ಮಂತ್ರ ಘೋಷಣೆ ಜಯ ಘೋಷಣೆ ಯೊಂದಿಗೆ ನೀಡಿದರು.
ಕಾರ್ಯಕ್ರಮ ಇಂದೂರ್ ವಿಮಾನ ನಿಲ್ದಾಣ ಸಮೀಪ ಸುಮಾರು 65 ಎಕ್ರೆ ಪ್ರದೇಶ ದಲ್ಲಿ ನಿರ್ಮಾಣ ಗೊಂಡ ಸುಮತಿ ಧಾಮ ಕ್ಷೇತ್ರ ದಲ್ಲಿ ಶ್ರದ್ದಾ ಭಕ್ತಿಯಿಂದ ಜರುಗಿತು. ಈ ಸಂಧರ್ಭ ಮೂಡುಬಿದಿರೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಚಾರ್ಯ ವರ್ಯ ಮಹಾ ಸ್ವಾಮೀಜಿ ಶಾಸ್ಟ ದಾನ ಮಾಡಿದರು ಉಪಸ್ಥಿತ ಅರಹಂತ ಗಿರಿ, ನಾಂದಿಣಿ, ಕಂಬದ ಹಳ್ಳಿ, ಸೊಂದಾ, ಏನ್ ಆರ್ ಪುರ, ತಿಜಾರ, ಸ್ವಾಮೀಜಿ ಸಮಸ್ತ ಭಟ್ಟಾರಕ ರ ವತಿಯಿಂದ ಅತಿಶಯ ಆಚಾರ್ಯ ಉಪಾದಿ ನೀಡಿ ವಿನಯಾoಜ ಲಿ ಅರ್ಪಿಸಿದರು. ಕರ್ನಾಟಕ ದ ಚಂದ್ರ ಕಾಂತ ಪಂಡಿತ್ ದೆಹಲಿ ಅಷ್ಟ ಪದ ಧರ್ಮ ಚಂದ್ರ ಶಾಸ್ತ್ರೀ ಪೂಜಾ ವಿಧಿ ವಿಧಾನ ನೆರವೇರಿಸಿದರು. ಮಾನಿಶ್ ಗೋದಾ, ಸಪ್ನಾ ಗೋಧಾ ಕಾರ್ಯಕ್ರಮ ದ ನೇತ್ರತ್ವ ವಹಿಸಿದ್ದರು. ಪ್ರಸಿದ್ದ ವಾಗ್ಮಿ ಉಜ್ವಲ ಪಾಟ್ನಿ, ಪಾರಸ ಮೋಧಿ, ವಿವಿಧ ರಾಜ್ಯ ಗಳಿಂದ ಬಂದ ಗಣ್ಯರು ಆಚಾರ್ಯ ಸಂಘ ದ ಆಶೀರ್ವಾದ ಪಡೆದರು.

LEAVE A REPLY

Please enter your comment!
Please enter your name here