ಮಂಗಳೂರು:ಏಪ್ರಿಲ್ 27 ರಿಂದ 30 ರವರೆಗೆ ಮಂಗಳೂರಿನ ಲಾಲ್‌ಬಾಗ್‌ನಲ್ಲಿ ನಡೆದ 24 ನೇ ಕರ್ನಾಟಕ ರಾಜ್ಯ ವುಶು ಚಾಂಪಿಯನ್‌ಶಿಪ್ 2025 ಸಬ್ ಜೂನಿಯರ್, ಜೂನಿಯರ್ ಮತ್ತು ಸೀನಿಯರ್ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆಯನ್ನು ಪ್ರದರ್ಶಿಸಿತು.
ಜಿಲ್ಲಾ ವುಶು ಕಾರ್ಯದರ್ಶಿ ಮತ್ತು ಇಮ್ಮಾರ್ಟಲ್ಸ್ ಮಾರ್ಷಲ್ ಆರ್ಟ್ಸ್ ಹಾಗೂ ಫಿಟ್‌ನೆಸ್ ಅಕಾಡೆಮಿಯ ಸಂಸ್ಥಾಪಕ ರೋಹನ್ ಎಸ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಈ ಪಂದ್ಯಾಟವು ಕೌಶಲ್ಯ, ಶಿಸ್ತು ಮತ್ತು ಕ್ರೀಡಾ ಮನೋಭಾವಕ್ಕೆ ತೆರೆದುಕೊಂಡಂತಿತ್ತು.
ಹಿಸ್ಸಾನ್, ಶಮಿಯುಲ್ಲಾ, ಸಾನ್ವಿ ಎಸ್, ಮನ್ವಿತಾ, ಧ್ರುವಿನ್, ಆರ್ನಾ ಎಚ್, ಪ್ರಥಮ್, ಪ್ರಜ್ವಲ್ ಮತ್ತು ಜಯಶ್ರೀ ಪಂದ್ಯಾಟದಲ್ಲಿ ಚಿನ್ನದ ಪದಕ ವಿಜೇತರಾದರು.
ಅದ್ನಾನ್, ಹರ್ಷಿತ್, ಹಮ್ದಾನ್, ತನುಫ್, ಕಾಶ್ವಿ, ಜುಮೈಲಾ, ದಿಯಾ, ಶಿಫಾ, ಹನೀನ್ ಮತ್ತು ಜಾಸ್ಲಿನ್ ಇವರು ಬೆಳ್ಳಿ ಪದಕಗಳನ್ನು ಪಡೆದುಕೊಂಡರು. ಭವ್ಯೇಶ್, ರಿಯಾನ್, ಅಫ್ಫಾನ್, ಮೋನಿಶ್, ಜೈದ್, ಹರ್ಷಲ್ ಎನ್, ಹರ್ಷಲ್ ಎ, ನಜ್ಮಿನ್, ಮಾಹೇರ್, ಆರವ್, ಶ್ರವಂತ್, ಭನ್ವಿ, ಕ್ಷಿತಿಜ್, ಜಾನಿತ್, ಯಶ್, ಪ್ರತೀಕ್ ಮತ್ತು ಸೇನಾನ್ ಕಂಚಿನ ಪದಕ ಗಳಿಸಿದರು.
ಈ ಪಂಧ್ಯಾಟವು ಉದಯೋನ್ಮುಖ ಚಾಂಪಿಯನ್‌ಗಳನ್ನು ಪರಿಚಯಿಸಿದ್ದಲ್ಲದೆ, ರಾಜ್ಯ ವುಶು ತೀರ್ಪುಗಾರರು ಮತ್ತು ತರಬೇತುದಾರರು ಹಾಗೂ ಡಿ.ಕೆ.ಡಬ್ಲ್ಯೂ.ಯು.(DKWU) ನ ಉತ್ಸಾಹಿ ಪ್ರಧಾನ ಕಾರ್ಯದರ್ಶಿ ರೋಹನ್ ಎಸ್ ಅವರ ಸಂಪೂರ್ಣ ಮಾರ್ಗದರ್ಶನದಲ್ಲಿ ಕರ್ನಾಟಕದಲ್ಲಿ ವುಶುವಿನ ಕ್ರೀಡೆಯು ಯುವ ಕ್ರೀಡಾಪಟುಗಳನ್ನು ಬೆಳೆಸುತ್ತಿರುವುದು ಕ್ರೀಡಾ ಲೋಕದಲ್ಲಿ ಒಂದು ಒಳ್ಳೆಯ ಬೆಳವಣಿಗೆಯಾಗಿದೆ.