ಸಮಾಜಕ್ಕಾಗಿ ಸರ್ವಸ್ವವನ್ನೂ ಸಮರ್ಪಿಸಿಕೊಂಡ ಸದಾಶಿವ್ ಜೀ: ಶ್ರೀ ಧಾ ಮಾ ರವೀಂದ್ರ

0
313

ಮೇ ೫,೨೦೨೫ ರಂದು ನಿಧನರಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ದ ಹಿರಿಯ ಪ್ರಚಾರಕರು, ಆರೋಗ್ಯ ಭಾರತಿ ಅಖಿಲ ಭಾರತೀಯ ಕಾರ್ಯಕಾರಿಣಿ ಮಂಡಳಿ ಸದಸ್ಯರು ಮತ್ತು ಆರೋಗ್ಯ ಭಾರತಿ ದಕ್ಷಿಣ ಕ್ಷೇತ್ರದ ಸಂಯೋಜಕರು,ಅಖಿಲ ಭಾರತ ಸ್ವಸ್ಥ ಗ್ರಾಮ ಪ್ರಮುಖ ಆಗಿದ್ದ ಶ್ರೀ ಸದಾಶಿವ ಜೀ ಅವರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕರ್ನಾಟಕ ದಕ್ಷಿಣ ಪ್ರಾಂತ ಸೇವಾ ಭಾರತಿ ಮತ್ತು ಆರೋಗ್ಯ ಭಾರತಿ ವತಿಯಿಂದ ದಿನಾಂಕ ೧೯/೦೫)೨೦೨೫ನೇ ಭಾನುವಾರ ಸಂಘ ನಿಕೇತನ ದಲ್ಲಿ ಶ್ರದ್ದಾಂಜಲಿ ಕಾರ್ಯಕ್ರಮ ಜರುಗಿತು.
ಹಿರಿಯ ಪ್ರಚಾರಕರಾದ ಶ್ರೀ ಧಾ ಮ ರವೀಂದ್ರಜೀ ಅವರು ಮಾತನಾಡಿ ಸದಾಶಿವಜೀ ಅವರ ಸೇವಾ ತತ್ಪರತೆ ಮತ್ತು ಕಾರ್ಯ ವೈಖರಿಯನ್ನು ಕೊಂಡಾಡಿದರು. ಸಮಾಜದ ಸೇವೆಗಾಗಿ ಸರ್ವಸ್ವವನ್ನು ಸಮರ್ಪಿಸಿಕೊಂಡ ಸದಾಶಿವಜೀ ಅವರಿಗೆ ಮೋಕ್ಷ ಸಿಕ್ಕೇ ಸಿಗುತ್ತದೆ ಎಂದು ಹಾರೈಸಿದರು.
ಮಂಗಳೂರು ವಿಭಾಗ ಸಂಘ ಚಾಲಕರಾದ
ಡಾ ನಾರಾಯಣ ಶೆಣೈ, ಮಂಗಳೂರು ಮಹಾನಗರ ಸಂಘ ಚಾಲಕರಾದ ಡಾ ಸತೀಶ್ ರಾವ್,ಶ್ರೀ ಚೆನ್ನಯ್ಯ ಸ್ವಾಮಿ,ಡಾ ಅಜೇಯ ರಾವ್,ಡಾ ಮುರಲೀ ಮೋಹನ್ ಚೂಂತಾರು ನುಡಿ ನಮನ ಸಲ್ಲಿಸಿದರು.ಶ್ರೀ ಪುರುಷೋತ್ತಮ ದೇವಸ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.ಶ್ರೀ ಕೇಶವ ನಂದೋಡಿ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here