ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ ಬುನಾದಿ ಶಿಕ್ಷಣ ಚಿಂತನಾ ಬೈಠಕ್ ‘ ಅಂಕುರ-25 ‘ ಉದ್ಘಾಟನೆ.

0
162

ಮಾನವನ ಶರೀರವು ಪಂಚಭೂತಗಳಿಂದ ನಿರ್ಮಿತವಾಗಿದೆ.ಅದು ಪಂಚಕರ್ಮಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಶಾಲೆಯಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಗೆ ಬುನಾದಿ ಶಿಕ್ಷಣವನ್ನು ಸಮರ್ಪಕವಾಗಿ ಬಳಸಬೇಕು. ಅದಕ್ಕಾಗಿ ಇಂತಹ ತರಬೇತಿಯು ಅಗತ್ಯವಿದೆ. ವಿದ್ಯಾಭಾರತಿ ಕರ್ನಾಟಕ ತನ್ನ ಶೈಕ್ಷಣಿಕ ಸಂಯೋಜಿತ ಸಂಸ್ಥೆಯ ಗುರೂಜಿ ಮಾತಾಜಿಯವರಿಗೆ ಔಚಿತ್ಯ ಪೂರ್ಣವಾಗಿ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಯಿಂದ ನೀಡುವುದು ಶ್ಲಾಘನೀಯ ಎಂದು ಅಧ್ಯಕ್ಷರು ಶಾಂತಿಧಾಮ ಪೂರ್ವ ಗುರುಕುಲ ಕೋಟೇಶ್ವರದ ಕೃಷ್ಣರಾಯ ಶಾನುಭಾಗ್ ಹೇಳಿದರು.
ಶಾಂತಿಧಾಮ ಪೂರ್ವ ಗುರುಕುಲ ಕೋಟೇಶ್ವರ ಸಂಸ್ಥೆಯಲ್ಲಿ ನಡೆದ ಬುನಾದಿ ಶಿಕ್ಷಣ ಚಿಂತನ ಬೈಠಕ್ ಅಂಕುರ – 25 ತರಬೇತಿ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸುವುದರೊಂದಿಗೆ ಮಾತನಾಡಿದರು.
ವಿದ್ಯಾಭಾರತಿ ಕರ್ನಾಟಕ ಜಿಲ್ಲಾ ಶಿಶು ಶಿಕ್ಷಣ ಪ್ರಮುಖ್ ಶ್ರೀಮತಿ ಪ್ರತಿಮಾ ಪ್ರಾಸ್ತಾವಿಕ ಮಾತುಗಳನ್ನಾಡಿದರು.ವಿದ್ಯಾಭಾರತಿ ಕರ್ನಾಟಕ ಜಿಲ್ಲಾ ಕಾರ್ಯದರ್ಶಿ ಮಹೇಶ್ ಹೈಕಾಡಿ ಧನ್ಯವಾದ ಸಲ್ಲಿಸಿದರು, ಮುಖ್ಯೋಪಾಧ್ಯಾಯರು ಅನಂತ ನಾಯ್ಕ್ ಸ್ವಾಗತಿಸಿದರು . ನಿರೂಪಣೆ ಮಾತಾಜಿ ಅಮೃತ ನಿರ್ವಹಿಸಿದರು.
ಶಿಶುವಾಟಿಕ ಶಿಕ್ಷಣ ಸಹ ಪ್ರಮುಖ್ ವಿದ್ಯಾಭಾರತಿ ದಕ್ಷಿಣ ಮಧ್ಯಕ್ಷೇತ್ರ ಶ್ರೀಮತಿ ತಾರ.ಕೆ . ಬೆಂಗಳೂರು ಬುನಾದಿ ಶಿಕ್ಷಣ ಚಿಂತನ ಬೈಠಕ್ ನ ಸಂಪನ್ಮೂಲ ವ್ಯಕ್ತಿಯಾಗಿ ಶಿಶುಶಿಕ್ಷಣದ ಸಮಗ್ರ ಮಾಹಿತಿಯನ್ನು ನೀಡಿದರು.

ಶಾಂತಿಧಾಮ ಪೂರ್ವ ಗುರುಕುಲದ ಟ್ರಸ್ಟಿ ಪ್ರೇಮಾನಂದ ಶೆಟ್ಟಿ , ಸದಸ್ಯರು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ರಾಮಪ್ರಸಾದ ಭಟ್ ,ವಿವಿಧ ವಿದ್ಯಾ ಸಂಸ್ಥೆಗಳ 41 ಮಾತಾಜಿ ಗುರೂಜಿ ಯವರು ,ಜಿಲ್ಲಾ ಸಮಿತಿಯ ಸದಸ್ಯರು, ವಿಷಯ ಪ್ರಮುಖ್ ರು  ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here