Saturday, June 14, 2025
HomeUncategorizedಶಿಕ್ಷಣ, ಕೌಶಲ್ಯ ಮತ್ತು ಸಂಸ್ಕೃತಿಯ ಹಬ್ಬ : ಕೊರಗ ಮಕ್ಕಳ ಶೈಕ್ಷಣಿಕ ಬೇಸಿಗೆ ಶಿಬಿರ

ಶಿಕ್ಷಣ, ಕೌಶಲ್ಯ ಮತ್ತು ಸಂಸ್ಕೃತಿಯ ಹಬ್ಬ : ಕೊರಗ ಮಕ್ಕಳ ಶೈಕ್ಷಣಿಕ ಬೇಸಿಗೆ ಶಿಬಿರ

ಜಿಲ್ಲಾಡಳಿತ ಸಮಗ್ರ ಗಿರಿಜನ ಯೋಜನಾ ಇಲಾಖೆ ಉಡುಪಿ, ಸಮಗ್ರ ಗ್ರಾಮೀಣ ಆಶ್ರಮ ಪೆರ್ನಾಲ್ – ಶಿರ್ವ ಮತ್ತು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ – ಕೇರಳ ಇವರ ಜಂಟಿ ಆಶ್ರಯದಲ್ಲಿ ಕೊರಗ ಮಕ್ಕಳ ಶೈಕ್ಷಣಿಕ ಬೇಸಿಗೆ ಶಿಬಿರವು ನಡೆಯಿತು. ಈ ಶಿಬಿರದಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳು ಆಗಮಿಸಿ ಮಾಹಿತಿ ಮತ್ತು ತರಬೇತಿ ನೀಡಿದರು.

ಕೊರಗ ಸಮುದಾಯದ ಪರಿಚಯ ಮತ್ತು ಸುಲಭ ವಾಗಿ ಇಂಗ್ಲಿಷ್ ವ್ಯಾಕರಣ ಕಲಿಕೆ:

ಮಂಗಳೂರು ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಸಬಿತಾ ಗುಂಡ್ಮಿರವರು ಕೊರಗ ಸಮುದಾಯದ ಪರಿಚಯವನ್ನು ಮಾಡುವುದರ ಜೊತೆಗೆ ಸಮಸ್ಯೆಗಳನ್ನು ಹೇಗೆ ಬಗೆಹರಿಸಿಕೊಳ್ಳಬಹುದೆಂಬುದ ನ್ನು ತಿಳಿಸಿದರು. ಮತ್ತು ಬೇಸಿಕ್ ಇಂಗ್ಲಿಷ್ ಕಲಿಕೆ, ವಾಕ್ಯ ರಚನೆ, ಮತ್ತು ಇಂಗ್ಲಿಷ್ ವ್ಯಾಕರಣ ಕುರಿತು ಮಕ್ಕಳಿಗೆ ತಿಳಿಸಿದರು.

ಆರೋಗ್ಯ ಮಾಹಿತಿ :

ಮುದರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಮಕ್ಕಳ ಆರೋಗ್ಯ ತಪಾಸಣೆ ನಡೆಯಿತು. ಮಕ್ಕಳ ತೂಕ, ರಕ್ತ ಪರೀಕ್ಷೆ ಮಾಡಲಾಯಿತು. ಶೀತ, ಜ್ವರ, ಕೆಮ್ಮು ಆರೋಗ್ಯ ಸಮಸ್ಯೆ ಇದ್ದ ಮಕ್ಕಳಿಗೆ ಔಷಧಿ ನೀಡಿದರು. ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಮಕ್ಕಳಿಗೆ ತಿಳಿಸಲಾಯಿತು.
ಮಕ್ಕಳ ಆರೋಗ್ಯದ ಸಮಸ್ಯೆ ಹಾಗೂ ಪರಿಹಾರದ ಕುರಿತು ಮಾಹಿತಿ ನೀಡಲು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾಕ್ಟರ್‌ ಸುಬ್ರಹ್ಮಣ್ಯ ಪ್ರಭು ಇವರು ವೈಯಕ್ತಿಕ ಸ್ವಚ್ಛತೆ, ಸಾಂಕ್ರಮಿಕ ರೋಗಗಳ ಬಗ್ಗೆ ಜಾಗೃತಿ ವಹಿಸುವಂತೆ ತಿಳಿಹೇಳಿದರು. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಇದ್ದ ಮಕ್ಕಳಿಗೆ ಔಷಧಿ ನೀಡಿದರು. ಮ್ತತು ಆರೋಗ್ಯದ ಕಾಳಜಿ ವಹಿಸುವಂತೆ ಮಕ್ಕಳಿಗೆ ಕರ ಪತ್ರಗಳನ್ನು ನೀಡಿದರು.

ಹದಿಹರೆಯ ಮತ್ತು ಮಾನಸಿಕ ಸಮಸ್ಯೆಗಳು

ಉಡುಪಿ ಬಾಳಿಗ ಆಸ್ಪತ್ರೆಯ ಮನೋವೈದ್ಯರಾಗಿರುವ ಡಾ. ಪಿ.ವಿ ಭಂಡಾರಿ ಯಾವೆಲ್ಲ ರೀತಿಯ ಚಟಗಳು ಮನುಷ್ಯನ ಬದುಕನ್ನು ಅಂತ್ಯಗೊಳಿಸುತ್ತದೆ, ಹದಿಹರೆಯದ ಸಮಸ್ಯೆಗಳು ಯಾವುದು? ಕನಸು, ಶಿಸ್ತು, ಗುರಿ, ನಿರ್ಣಯ ಮತ್ತು ಸಮರ್ಪಣೆ ಎಂಬ 5 ಸೂತ್ರಗಳನ್ನು ಇಟ್ಟುಕೊಂಡು ಜೀವನದಲ್ಲಿ ಸಾಧನೆ ಮಾಡುವ ವಿಧಾನ ಹಾಗೂ ಅವುಗಳನ್ನು ಸಾಧಿಸುವತ್ತ ಗಮನಹರಿಸಬೇಕು ಎಂಬುದನ್ನು ತಿಳಿಸಿದರು.

ಚಿತ್ರಕಲೆ ಮತ್ತು ವರ್ಲಿ ಆರ್ಟ್

ಉಮೇಶ್ ಪುತ್ತೂರುರವರು ವರ್ಲಿ ಆರ್ಟ್ ತರಬೇತಿ ನೀಡಿದರು. ಮಕ್ಕಳೊಂದಿಗೆ ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸಿದರು.

ರಂಗ ತರಬೇತಿ:

ಕೃಷ್ನಪ್ಪ ಬಂಬಿಲ ಮತ್ತು ತಂಡದವರಿಂದ ನಾಟಕ ತರಬೇತಿ ನಡೆಯಿತು. ಮಕ್ಕಳಿಗೆ ಅಭಿನಯ, ಸಂಭಾಷಣೆಗಳ ಮೂಲಕ ನಾಟಕ ತಯಾರಿಸಿದರು. ಮಕ್ಕಳು ಉತ್ತಮವಾಗಿ ಪ್ರದರ್ಶಿಸಿದರು.

ನೃತ್ಯ ತರಬೇತಿ:

ಸುನಿಲ್ ಕಾರ್ಕಳ ಇವರು ಮಕ್ಕಳಿಗೆ ಬೇರೆ ಬೇರೆ ತಂಡ ರಚಿಸಿ ವಿವಿಧ ರೀತಿಯ ನೃತ್ಯ ತರಬೇತಿ ನೀಡಿದರು.

ಸೃಜನಾತ್ಮಕ ಬರವಣಿಗೆ ಮತ್ತು ಓದು:

ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯಶಾಸ್ತ್ರದ ಉಪನ್ಯಾಸಕರಾಗಿರುವ ಡಾ. ದಿನಕರ ಕೆಂಜೂರು ರವರು ಓದು ಮತ್ತು ಬರಹದ ಪ್ರಾಮುಖ್ಯತೆ, ಜೀವನದ ಗುರಿ ಸಾಧನೆಯನ್ನು ತಲುಪುವಲ್ಲಿ ನಮ್ಮ ಪ್ರಯತ್ನ, ಶಿಕ್ಷಣದ ಕಡೆಗೆ ನಮ್ಮ ಒಲವು ಹೆಚ್ಚಾಗಿರಬೇಕು,ಮುಂತಾದ ಪ್ರಮುಖ ವಿಷಯ ಗಳನ್ನು ತಿಳಿಸಿದರು.

ನಲಿಕಲಿ ಮಾದರಿ ಶಿಕ್ಷಣ:

ಪ್ರಜ್ಞಾ ನೆಲ್ಲಿಂಗೇರಿ ಉಪನ್ಯಾಸಕರು, ಭೌತಶಾಸ್ತ್ರ ವಿಭಾಗ ಸರಕಾರಿ ಪದವಿ ಪೂರ್ವ ಕಾಲೇಜು ಬಜಗೋಳಿ ರವರು ನಲಿಕಲಿ ಮಾದರಿ ಶಿಕ್ಷಣ ಕುರಿತು ಮಕ್ಕಳೊಂದಿಗೆ ಚರ್ಚೆ ನಡೆಸಿದರು. ವಿಜ್ಞಾನ ಪ್ರಯೋಗ, ಸುಲಭ ಮಾದರಿಯ ಗಣಿತ ಕಲಿಕೆ, ಗೊಂಬೆ ಆಟದ ಮೂಲಕ ಮನೋರಂಜನೆ, ಏಕಾಗ್ರತೆಯ ಆಟಗಳನ್ನು ಹೇಳಿಕೊಟ್ಟರು.

RELATED ARTICLES
- Advertisment -
Google search engine

Most Popular