ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದಲ್ಲಿ ಅಂತರಾಷ್ಟ್ರೀಯ ಸಮ್ಮೇಳನ ಮತ್ತು ಮ್ಯಾಗ್ನಮ್‌ ಪೆಸ್ಟ್‌

0
90

ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿಯ ವಾಣಿಜ್ಯ ವಿಭಾಗವು ದಿನಾಂಕ 29 ಮತ್ತು 30 ರಂದು ವಾಣಿಜ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ – ಚಾಲಿತ ಜಾಗತಿಕ ವಿದ್ಯಮಾನಗಳು ಎಂಬ ವಿಷಯದ ಕುರಿತು ಬ್ಯಾಂಕ್‌ ಆಪ್‌ ಬರೋಡ ಚೇರ್‌, ಕೆನರಾ ಬ್ಯಾಂಕ್‌ ಚೇರ್‌ ಮತ್ತು ಯೂನಿಯನ್‌ ಬ್ಯಾಂಕ್‌ ಚೇರ್‌ ಸಂಯೋಜನೆಯೊಂದಿಗೆ ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನ ನಡೆಸಲಿದೆ.
ವಾಣಿಜ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಸ್ತುತ ಬೆಳವಣಿಗೆಗಳು ಮತ್ತು ಪರಿವರ್ತನೆಗಳನ್ನು ಕಲಿಯುವ ಹಾಗೂ ವಿಶ್ಲೇಷಿಸುವುದು ಈ ಸಮ್ಮೇಳನದ ಪ್ರಯತ್ನವಾಗಿದೆ. ಮುಖ್ಯ ಥೀಮ್ ಗಳಾಗಿ ಹಣಕಾಸು, ಮಾರ್ಕೆಟಿಂಗ್, ಮಾನವ ಸಂಪತ್ತು ನಿರ್ವಹಣೆ, ಮಾಹಿತಿ ತಂತ್ರಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಸಜ್ಜಿತ ಸ್ಮಾರ್ಟ್ ವ್ಯವಹಾರ ಮೌಲಿಕತೆಯಂತಹ ವಿಷಯಗಳನ್ನು ಒಳಗೊಂಡಿರುತ್ತವೆ.

ಸಮ್ಮೇಳನದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಕೌನ್ಸಿಲ್‌ನ ಉಪಾಧ್ಯಕ್ಷರಾದ ಪ್ರೊ. ಎಸ್‌. ಆರ್. ನಿರಂಜನ‌ ನೆರವೇರಿಸಲಿದ್ದು, ಮುಖ್ಯ ಅತಿಥಿಯಾಗಿ ಭಾಷಣವನ್ನು ಜ್ಯೋತಿ ಲ್ಯಾಬ್ಸ್ ಲಿಮಿಟೆಡ್‌ ಹಾಗೂ ಎಪ್‌.ಐ.ಸಿ.ಸಿ.ಐ.ನ ಮಾಜಿ ಎಂ.ಡಿ. ಸಿ. ಎ. ಕೆ. ಉಲ್ಲಾಸ್‌ ಕಾಮತ್‌ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೋ. ಪಿ.ಎಲ್. ಧರ್ಮ ವಹಿಸಲಿದ್ದಾರೆ.
ಅತಿಥಿಗಳಾಗಿ ಕುಲಸಚಿವರಾದ ಕೆ. ರಾಜು ಮೊಗವೀರ, ಚಾರ್ಟೆಡ್ ಅಕೌಂಟೆಟ್‌ ಸಿ. ಎ. ನಿತಿನ್‌ ಜೆ. ಶೆಟ್ಟಿ, ಇನ್ಫೋಸಿಸ್ ಮಂಗಳೂರು ಅಭಿವೃದ್ಧಿ ಕೇಂದ್ರದ ಮುಖ್ಯಸ್ಥರು ಹಾಗೂ ಅಧ್ಯಕ್ಷರಾದ ವಾಸುದೇವ ಕಾಮತ್‌, ಜಿಂಬಾಬ್ವೆ ದೇಶದ ತಜ್ಞರಾದ ವಿನ್ನಿ ಸಿಬೊಂಗೆಲೆ ಬಾಜಿಲ್ಲಾ, ಬ್ಯಾಂಕ್‌ ಆಪ್‌ ಬರೋಡದ ಮಂಗಳೂರು ಪ್ರಾಂತೀಯ ಮುಖ್ಯಸ್ಥರಾದ ರಾಜೇಶ್‌ ಖನ್ನಾ, ಕೆನರಾ ಬ್ಯಾಂಕ್‌ ಜನರಲ್‌ ಮೆನೇಜರ್‌ ಮಂಜುನಾಥ್‌ ಬಿ. ಸಿಂಘ್ಯೆ ಮತ್ತು ಯೂನಿಯನ್‌ ಬ್ಯಾಂಕ್‌ ಜನರಲ್‌ ಮೆನೇಜರ್‌ ರಾಜೇಂದ್ರ ಕುಮಾರ್‌ ಭಾಗವಹಿಸಲಿದ್ದಾರೆ.

ಉದ್ಘಾಟನೆ ಬಳಿಕ ವಾಣಿಜ್ಯ ಕ್ಷೇತ್ರದಲ್ಲಿ ಕೃತಕ ಬುದ್ದಿ ಮತ್ತೆಯ ಜವಾಬ್ದಾರಿ ಎಂಬ ವಿಷಯದ ಕುರಿತು ಪ್ಯಾನಲಿಸ್ಟ್ ಚರ್ಚೆ ನಡೆಯಲಿದ್ದು ಪ್ಯಾನಲಿಸ್ಟ್ ಗಳಾಗಿ ಇನ್ಫೋಸಿಸ್ ಮಂಗಳೂರು ಅಭಿವೃದ್ಧಿ ಕೇಂದ್ರದ ಮುಖ್ಯಸ್ಥರು ಮತ್ತು ಅಧ್ಯಕ್ಷರಾದ ವಾಸುದೇವ ಕಾಮತ್‌, ಜಿಂಬಾಬ್ವೆ ದೇಶದ ತಜ್ಞರಾದ ವಿನ್ನಿ ಸಿಬೊಂಗೆಲೆ ಬಾಜಿಲ್ಲಾ, ಹಾಂಕಾಂಗ್‌ನ ಡಾಟ ಸೈಂಟಿಸ್ಟ್‌ ಕ್ರಿಸ್‌ ಲೆವಿಸ್‌, ಮತ್ತು ಡಾ. ಸುರೇಖ ಅನವಳ್ಳಿರವರು ವಿಷಯದ ಕುರಿತು ಮಾತನಾಡಲಿದ್ದಾರೆ. ಪ್ಯಾನಲಿಸ್ಟ್ ನ ನಿರ್ವಾಹಕರಾಗಿ ಪ್ರೋ. ಪರಮೇಶ್ವರ ನಿರ್ವಹಿಸಲಿದ್ದಾರೆ. ವಿವಿಧ ಟೆಕ್ನಿಕಲ್ ಷೆಶನ್ ನ ಅಧ್ಯಕ್ಷರಾಗಿ ಪ್ರೋ. ವೈ. ಮುನಿರಾಜು, ಪ್ರೋ. ಈಶ್ವರ ಪಿ, ಪ್ರೋ. ವೇದವ ಪಿ, ಪ್ರೋ. ಪರಮೇಶ್ವರ ಮತ್ತು ಡಾ. ಪ್ರೀತಿ ಕೀರ್ತಿ ಡಿಸೋಜ ವಹಿಸಲಿದ್ದಾರೆ.

ಸಂಜೆ ಸಾಂಸ್ಕ್ರತಿಕ ಸ್ಪರ್ಧೆ ಮತ್ತು ಕಾರ್ಯಕ್ರಮ ನಡೆಯಲಿದ್ದು ವಿಶೇಷವಾಗಿ ಸ್ಕೂಲ್‌ ಲೀಡರ್‌ ಎಂಬ ತುಳು ಸಿನಿಮಾ ತಂಡವು ಭಾಗವಹಿಸಲಿದೆ.

ಎರಡನೆಯ ದಿನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ಸೈಂಟ್‌ ಜೋಸೆಪ್ ಇಂಜಿನಿಯರಿಂಗ್‌ ಕಾಲೇಜಿನ ಡೀನ್‌ ಪ್ರೋ. ಪ್ರಕಾಶ್‌ ಪಿಂಟೋ ಹಾಗೂ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯ ವಾಣಿಜ್ಯ ನಿಕಾಯದ ಡೀನ್‌ ಪ್ರೋ. ಪುಟ್ಟಣ್ಣ ಕೆ. ಭಾಗಹಿಸಲಿದ್ದಾರೆ. ವೇದಿಕೆಯಲ್ಲಿ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಪ್ರೋ. ವೈ. ಮುನಿರಾಜು, ಪ್ರೋ. ಈಶ್ವರ ಪಿ, ಪ್ರೋ. ವೇದವ ಪಿ, ಮತ್ತು ಪ್ರೋ, ಪರಮೇಶ್ವರ ಉಪಸ್ಥಿತರಿರುವರು. ಸಭಾಧ್ಯಕ್ಷತೆಯನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಪ್ರೀತಿ ಕೀರ್ತಿ ಡಿಸೋಜ ವಹಿಸಲಿದ್ದಾರೆ.

ಮ್ಯಾಗ್ನಮ್‌ ಪೆಸ್ಟ್

ವಾಣಿಜ್ಯ ವಿಭಾಗವು ಪ್ರತಿ ವರುಷವು ಆಯೋಜಿಸುತ್ತಿರುವ ಮ್ಯಾಗ್ನಮ್‌ – 2025 ರಾಷ್ಟ್ರಮಟ್ಟದ ಮ್ಯಾನೇಜ್‌ಮೆಂಟ್‌ ಮತ್ತು ಕಲ್ಚರಲ್‌ ಪೆಸ್ಟ್‌ ʼಯುಗಾಂತರʼ ಎಂಬ ಹೆಸರಿನಲ್ಲಿ ಎರಡು ದಿನ ನಡೆಯಲಿದೆ. ಮ್ಯಾಗ್ನಮ್‌ ಪೆಸ್ಟ್‌ ನಲ್ಲಿ ಮುಖ್ಯವಾಗಿ ಪೈನಾನ್ಸ್‌, ಬ್ಯುಸಿನೆಸ್‌ ಕ್ವಿಜ್, ಇವೆಂಟ್‌ ಮ್ಯಾನೇಜ್ಮೆಂಟ್‌, ಮಾರ್ಕೆಟಿಂಗ್, ಪಬ್ಲಿಕ್‌ ರಿಲೇಷನ್‌ ಮತ್ತು ಬೆಸ್ಟ್‌ ಎಂಟ್ರಿಪ್ರಿನ್ಯುಯರ್‌ ಅಂತರ್‌ ಕಾಲೇಜು ಇವೆಂಟ್‌ಗಳು ನಡೆಯಲಿವೆ. ಮ್ಯಾಗ್ನಮ್‌ ಪೆಸ್ಟ್‌ ನಲ್ಲಿ ಸ್ಪರ್ದಿಸಲು ಅನೇಕ ಕಾಲೇಜಗಳಿಂದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಇಂಟಿಗ್ರೇಟಿವ್‌ ಕಾಮರ್ಸ್ ಐ 5 ಲ್ಯಾಬ್‌ ಉದ್ಘಾಟನೆ

ವಿದ್ಯಾಥಿಗಳು ಮತ್ತು ಸಂಶೋಧಕರಿಗೆ ಕಲಿಕೆ, ಜ್ಞಾನರ್ಜನೆಗೆ ಅನುಕೂಲವಾಗುವಂತೆ ಪ್ರಚಲಿತ ವಿದ್ಯಮಾನ, ಹೊಸ ಮಾದರಿಗಳು, ಕೃತಕ ಬುದ್ದಿಮತ್ತೆ ಇತ್ಯಾದಿ ಹೊಸ ಅನ್ವೇಷಣೆಗೆ ನವೀನ ಮಾದರಿಯ ಕಾಮರ್ಸ್ ಐ 5 ಲ್ಯಾಬ್ ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದಲ್ಲಿ ಆರಂಭಗೊಳ್ಳಲಿದೆ. ಇದರ ಉದ್ಘಾಟನೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೋ. ಪಿ. ಎಲ್. ಧರ್ಮ ನೆರವೇರಿಸಲಿದ್ದಾರೆ.

ಸಮ್ಮೇಳನದಲ್ಲಿ ನಾಯಕರು, ತಜ್ಞರು, ಸಂಶೋಧನಾಕಾರರು, ಅಕಾಡೆಮಿಷಿಯನ್‌ಗಳು ಮತ್ತು ಕೈಗಾರಿಕಾ ವೃತ್ತಿಪರರು ದೇಶ ವಿದೇಶಗಳಿಂದ ಭಾಗವಹಿಸಲಿದ್ದಾರೆ. ಎರಡು ದಿನಗಳ ಸಮ್ಮೇಳನವು ಜ್ಞಾನ ಹಂಚಿಕೆ ಮತ್ತು ನೆಟ್‌ವರ್ಕಿಂಗ್‌ಗೆ ಅವಕಾಶ ಒದಗಿಸುವ ಮೌಲ್ಯಯುತ ವೇದಿಕೆಯಾಗಲಿದೆ. ಹೀಗೆ ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದಲ್ಲಿ ಎರಡು ದಿನ‌ ಸುದೀರ್ಘವಾಗಿ ಶೈಕ್ಷಣಿಕ ಚರ್ಚೆ, ಚಿಂತನೆ, ಸಮಾಲೋಚನೆ, ನೆಟ್ವರ್ಕಿಂಗ್ ಮತ್ತು ಇವೆಂಟ್ಗಳು ಜರುಗಲಿವೆ ಎಂದು ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಪ್ರೀತಿ ಕೀರ್ತಿ ಡಿಸೋಜ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here