ಕುಲಕಸುಬು ನೇಕಾರಿಕೆಯನ್ನು ಉಳಿಸಿ ಬೆಳೆಸಿ : ರತ್ನಾಕರ ಶೆಟ್ಟಿಗಾರ್
ಹೆಬ್ರಿ : ಸಂಘಟನೆಯ ಮೂಲಕ ಬಡವರನ್ನು ಮುನ್ನಲೆಗೆ ತರುವ ಕಾರ್ಯ ಆಗಲಿ, ನಮ್ಮ ಕುಲಕಸುಬು ನೇಕಾರಿಗೆ ನಶಿಸಿ ಹೋಗುತ್ತಿದ್ದು, ನೇಕಾರಿಕೆಯನ್ನು ಉಳಿಸಿ ಬೆಳೆಸಿ ಮುನ್ನಡೆಸುವ ಕಾರ್ಯವನ್ನು ಸಂಸ್ಥೆಯ ಮೂಲಕ ಮಾಡುತ್ತಿದ್ದೇವೆ. ನೇಕಾರಿಕೆ ಮಾಡಲು ಬಯಸುವ ಮಹಿಳೆಯರಿಗೆ ಸಂಸತೆಯು ನೆರವು ನೀಡಲಿದೆ ಎಂದು ಮಂಗಳೂರು ದಕ್ಷಿಣಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾದ ಉಪಾಧ್ಯಕ್ಷ ರತ್ನಾಕರ ಶೆಟ್ಟಿಗಾರ್ ಹೇಳಿದರು.
ಅವರು ಭಾನುವಾರ ಮುದ್ರಾಡಿಯಲ್ಲಿ ನಡೆದ ಶೆಟ್ಟಿಗಾರ್ ಸಮಾಜ ಸೇವಾ ಸಂಘ, ಮಹಿಳಾ ಹಾಗೂ ಯುವ ವೇದಿಕೆಯ ವತಿಯಿಂದ ನಡೆದ ೯ನೇ ವರ್ಷದ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಬಳಿಕ ನಡೆದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಮುದ್ರಾಡಿ ಪೇಟೆಯಲ್ಲಿ ನಿರ್ಮಾಣಗೊಂಡ ಸಂಘದ ನೂತನ ಕಛೇರಿ ಉದ್ಘಾಟಿಸಿ ಮಾತನಾಡಿದ ಹೆಬ್ರಿ ತಹಶೀಲ್ಧಾರ್ ಎಸ್.ಎ.ಪ್ರಸಾದ್ ಜೀವನಕ್ಕಾಗಿ ವಿದ್ಯೆ ಮುಖ್ಯ, ಸಮಾಜದ ಬಂಧುಗಳು ತಮ್ಮ ಮಕ್ಕಳ ಶಿಕ್ಷಣ, ಉನ್ನತ ಶಿಕ್ಷಣದತ್ತ ಹೆಚ್ಚಿನ ಒತ್ತು ನೀಡಬೇಕು ಆ ಮೂಲಕ ತಮ್ಮ ಬದುಕನ್ನು ಸದೃಡಗೊಳಿಸಿಕೊಳ್ಳಬೇಕು, ಸಮುದಾಯದ ಸಂಘಟನೆಯ ಮೂಲಕ ಸಮಾಜಮುಖಿ ಸೇವೆಗಳು ನಡೆಯಲಿ, ಎಲ್ಲರ ಕೊಡುಗೆಗಳು ಸಂಘಟನೆಗೆ ದೊರೆತಾಗ ಮಾತ್ರ ಸಂಸ್ಥೆ ಸದೃಡವಾಗಿ ಬೆಳೆದು ಸಬಲತೆ ಕಾಣುತ್ತದೆ ಎಂದರು.
ಮುದ್ರಾಡಿ ಶೆಟ್ಟಿಗಾರ್ ಸಮಾಜ ಸೇವಾ ಸಂಘದ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿಗಾರ್ ಮಾತನಾಡಿ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಸರ್ವರ ಸಹಕಾರ ಕೋರಿದರು. ಜನರ ಸೇವೆಗಾಗಿ ನಮ್ಮ ಸಂಸತೆಯು ನಿರಂತರವಾಗಿ ಶ್ರಮಿಸಲಿದೆ ಎಂದರು. ಸಂಘದ ಅಭಿವೃದ್ಧಿಗೆ ಸಹಕಾರ ನೀಡಿದ ದಾನಿಗಳು, ಪಿಯುಸಿಯಲ್ಲಿ ರಾಜ್ಯಕ್ಕೆ ೧೦ನೇ ಸ್ಥಾನ ಪಡೆದ ಹೆಬ್ರಿ ಎಸ್ ಆರ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಅಭಿಜ್ಞಾ ಶೆಟ್ಟಿಗಾರ್ ಸಹಿತ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪ್ರತಿಭಾಪುರಸ್ಕಾರ ನೀಡಲಾಯಿತು. ವಿಜಯ ಕುಮಾರ್ ಮುದ್ರಾಡಿ ಸಹಿತ ಹಲವರು ಅಭಿಪ್ರಾಯ ಹಂಚಿಕೊಂಡರು. ಹೆಬ್ರಿ ತಹಶೀಲ್ಧಾರ್ ಎಸ್.ಎ.ಪ್ರಸಾದ್ ಸಹಿತ ಹಲವರು ಗೀತೆಗಾಯನ ನಡೆಸಿಕೊಟ್ಟರು. ಬಾರ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜಯರಾಮ ಶೆಟ್ಟಿಗಾರ್, ಹಿರಿಯರಾದ ನಿವೃತ್ತ ಮೆಸ್ಕಾಂ ಉದ್ಯೋಗಿ ಮುನಿಯಾಲು ವಿಠ್ಠಲ ಶೆಟ್ಟಿಗಾರ್, ಮುದ್ರಾಡಿ ಶೆಟ್ಟಿಗಾರ್ ಸಮಾಜ ಸೇವಾ ಸಂಘದ ಮಹಿಳಾ ವೇದಿಕೆಯ ಅಧ್ಯಕ್ಷೆ ಪ್ರಮೀಳಾ ಜೆ. ಶೆಟ್ಟಿಗಾರ್, ಯುವ ವೇದಿಕೆ ಅಧ್ಯಕ್ಷ ಸುರೇಶ ಶೆಟ್ಟಿಗಾರ್, ಮುದ್ರಾಡಿ ಶೆಟ್ಟಿಗಾರ್ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಲೋಕೇಶ ಶೆಟ್ಟಿಗಾರ್ ಕನ್ಯಾನ, ಪ್ರಧಾನ ಕಾರ್ಯದರ್ಶಿ ನಾಗರಾಜ ಶೆಟ್ಟಿಗಾರ್ ಕಬ್ಬಿನಾಲೆ, ಜೊತೆಕಾರ್ಯದರ್ಶಿ ಅಶ್ವಿನಿ ಗಣೇಶ್ ಮುದ್ರಾಡಿ, ಕೋಶಾಧಿಕಾರಿ ಸದಾಶಿವ ಶೆಟ್ಟಿಗಾರ್, ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಘವೇಂದ್ರ ಶೆಟ್ಟಿಗಾರ್ ವಂದಿಸಿದರು. ದೀಪಾಶ್ರೀ ಲೋಕೇಶ್ ಹೆಬ್ರಿ ವರದಿ ಮಂಡಿಸಿದರು. ಸದಾಶಿವ ಶೆಟ್ಟಿಗಾರ್ ಲೆಕ್ಕಪತ್ರ ಮಂಡಿಸಿದರು. ಪ್ರಸನ್ನ ಶೆಟ್ಟಿಗಾರ್ ನಿರೂಪಿಸಿ ಶಶಿಕಲಾ ಪ್ರಸನ್ನ ಶೆಟ್ಟಿಗಾರ್ ಸ್ವಾಗತಿಸಿದರು.