ಬೇಸಿಗೆ ಶಿಬಿರದಲ್ಲಿ ಮಗುವಿನ ಮೇಲೆ ಶಿಕ್ಷಕನಿಂದ ಅತ್ಯಾಚಾರ

0
336

ಪುಣೆ : ಈಗಿನ್ನು ಸರಿಯಾಗಿ ನಿಲ್ಲುವುದನ್ನು ಕಲಿತು, ತೊದಲು ಮಾತು ಕಲಿಯುತ್ತಿದ್ದ ಎರಡೂವರೆ ವರ್ಷದ ಮಗುವಿನ ಮೇಲೆ ಬೇಸಿಗೆ ಶಿಬಿರದಲ್ಲಿ ಶಿಕ್ಷಕನೊಬ್ಬ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಗುವಿನ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 45 ವರ್ಷದ ನೃತ್ಯ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗು ಮನೆಗೆ ಹೋದ ಬಳಿಕ ತೀರಾ ನೋವಿನಿಂದ ಬಳಲುತ್ತಿತ್ತು, ಆಗ ಈ ಘಟನೆ ಬೆಳಕಿಗೆ ಬಂದಿದೆ. ಅದಕ್ಕೇನಾಗಿದೆ ಎಂದು ಹೇಳಲು ಕೂಡ ತಿಳಿಯುತ್ತಿಲ್ಲ.ಆಕೆಯ ಪೋಷಕರಿಗೆ ಘಟನೆಯ ಬಗ್ಗೆ ತಿಳಿದಾಗ, ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ನಂತರ ಪೊಲೀಸರು ಆತನನ್ನು ಹಿಡಿಯಲು ಹುಡುಕಾಟ ಆರಂಭಿಸಿದರು.

ಉಲ್ಲಾಸ್‌ನಗರ ಡಿಸಿಪಿ ಸಚಿನ್ ಗೋರ್ ಮತ್ತು ವಿಠ್ಠಲವಾಡಿ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಅನಿಲ್ ಪಡ್ವಾಲ್ ಅವರ ಮಾರ್ಗದರ್ಶನದಲ್ಲಿ ಆರೋಪಿಯನ್ನು ಆತನ ಮನೆಯಿಂದ ಬಂಧಿಸಿದರು. ಮರುದಿನ ಆರೋಪಿಯನ್ನು ಉಲ್ಲಾಸ್‌ನಗರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು, ಅಲ್ಲಿ ಅವನನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಯಿತು.

LEAVE A REPLY

Please enter your comment!
Please enter your name here