ಮಂಗಳೂರು: ರಾಜ ಕಾಲುವೆಗೆ ಸಂಚಾರದಲ್ಲಿದ್ದ ಕಾರೊಂದು ಬಿದ್ದಿದ್ದು, ಕಾರಿನಲ್ಲಿದ್ದ ಫೋಟೊಗ್ರಾಫರ್ ಸಾವನ್ನಪ್ಪಿದ ಘಟನೆ ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 66ರ ಕೋಡಿಕಲ್ ಕ್ರಾಸ್ ಬಳಿ ನಡೆದಿದೆ.
ಅಪಘಾತದಲ್ಲಿ ಕಾರು ಚಾಲಾಯಿಸುತ್ತಿದ್ದ ಫೋಟೊಗ್ರಾಫರ್ ಸೂರ್ಯ ನಾರಾಯಣ (48) ಸಾವನ್ನಪ್ಪಿದ್ದಾರೆ.
ಸೂರ್ಯನಾರಾಯಣ ಅವರು ಪಣಂಬೂರು ಬಳಿಯ ನಂದೀಕೇಶ್ವರ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮದ ಫೋಟೊಗ್ರಾಫಿಗೆಂದು ತನ್ನ ಕಾರಲ್ಲಿ ಹೊರಟಿದ್ದರು. ಈ ವೇಳೆ ಕೋಡಿಕಲ್ ಕ್ರಾಸ್ ಬಳಿ ತನ್ನ ಕಾರಿನ ನಿಯಂತ್ರಣ ತಪ್ಪಿ ಸಮೀಪದ ತೋಡಿಗೆ ಬಿದ್ದು ಅಫಘಾತವಾಗಿದೆ. ಕೂಡಲೇ ಸ್ಥಳೀಯರು ಗಾಯಗೊಂಡ ಸೂರ್ಯ ನಾರಾಯಣ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ರಾಜ ಕಾಲುವೆಯಲ್ಲಿ ಹೂಳೆತ್ತುವ ಕೆಲಸ ನಡೆಯುತ್ತಿತ್ತು. ಅಲ್ಲದೇ ಕಾಲುವೆ ಬದಿ ಬೆಳೆದಿದ್ದು ಪೊದೆಗಿಡಗಳನ್ನು ತೆಗೆಯುವ ಕೆಲಸವೂ ನಡೆಯುತ್ತಿತ್ತು. ಈ ವೇಳೆ ಸಂಚಾರದಲ್ಲಿದ್ದ ಕಾರುನಿಯಂತ್ರಣ ತಪ್ಪಿ ರಾಜಕಾಲುವೆಗೆ ಬಿದ್ದಿದೆ.