ಮಂಗಳೂರು : ಶಾಂತವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಸೇಡಿಗೆ ಪ್ರತಿ ಸೇಡಿನಂತೆ ಟಾರ್ಗೆಟ್ ಬಾಯ್ ಪೇಜ್ ಮೂಲಕ ಮತ್ತೆ ಟಾರ್ಗೆಟ್ ಮಾಡಿದ್ದಾರೆ. ಇನ್ನಾ ಗ್ರಾಮ್ ಪೇಜ್ ಮೂಲಕ ರಿವೇಂಜ್ ಬೆದರಿಕೆ ಹಾಕಿದ್ದು, ಭಜರಂಗದಳ ಮುಖಂಡ ಭರತ್ ಕುಮ್ಮೇಲ್ ಫೋಟೋ ಹಾಕಿ ರಿವೇಂಜ್ ಪೋಸ್ಟ್ ಮಾಡಿದ್ದಾರೆ.
ಭರತ್ ಕುಮ್ಮೇಲು SDPI ಕಾರ್ಯಕರ್ತ ಅಶ್ರಫ್ ಕಲಾಯಿ ಹತ್ಯೆಯ ಪ್ರಮುಖ ಆರೋಪಿಯಾಗಿದ್ದು, ಕಳೆದ ಕೆಲ ತಿಂಗಳುಗಳಿಂದ ಭರತ್ ಕುಮ್ಮೇಲು ಮೇಲೆ ನಿರಂತರ ಬೆದರಿಕೆ ಹಾಕಿದ್ದರು.
ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿತ್ತು. ಬಳಿಕ ರಿವೇಂಜ್ ಪೋಸ್ಟ್ ತಣ್ಣಗಾಗಿತ್ತು. ಇದೀಗ ಮತ್ತೆ ರಿವೇಂಜ್ ಪೋಸ್ಟ್ ವಾರ್ ಶುರುವಾಗಿದೆ.