ಉಡುಪಿ ಸಹಹೃದಯ ಬಳಗದವರಿಂದ ; ಉಚಿತ ಊಟೋಪಚಾರ

0
53

ಉಡುಪಿ; ಉಡುಪಿ  ಸಹಹೃದಯ ಬಳಗದವರಿಂದ  ಉಚಿತ ಊಟೋಪಚಾರ ವ್ಯವಸ್ಥೆ,  ಮೆಸ್ಕಾಂ  ಉಡುಪಿ ವಲಯದ ಆಶ್ರಯದಲ್ಲಿ ಮೇ  26 ರಿಂದ 29ರವರೆಗೆ ಉಡುಪಿ ಮಹಾತ್ಮಾಗಾಂಧಿ  ಕ್ರೀ ಡಾಂಗಣ ಅಜ್ಜರಕಾಡು ಉಡುಪಿಯಲ್ಲಿ ಕಿರಿಯ ಪವರ್ ಮ್ಯಾನ್ ಗಳ   ನೇಮಕಾತಿ  ಪರೀಕ್ಷೆಗೆ  ಆಗಮಿಸಿದ ಹೊರಜಿಲ್ಲೆಗಳ ಅಭ್ಯರ್ಥಿಗಳಿಗೆ  ( ಪ್ರತಿದಿನ 300 ಕ್ಕೂ ಹೆಚ್ಚು )   ಸಾವಿರಾರು ಮಂದಿಗೆ   ಉಚಿತ ಊಟೋಪಚಾರ ಕಾರ್ಯಕ್ಕೆ  ಉಡುಪಿ ಮೆಸ್ಕಾಂ ಅಧೀಕ್ಷಕರಾದ ಶ್ರೀ ದಿನೇಶ್ ಉಪಾಧ್ಯಾಯ  ದೀಪ ಬೆಳಗಿಸಿ   ಚಾಲನೆನೀಡಿ  ಇಂತಹ ಆತ್ಯತ್ತಮ ಕಾರ್ಯ ನಿರ್ವಹಿಸಿದ ಸಹಹೃದಯ ಬಳಗದವರನ್ನು ಅಭಿನಂದಿಸಿದರು.       

   ಮೆಸ್ಕಾಂ ವಿಭಾಗದ  ಅಧಿಕಾರಿಗಳಾದ  ಪ್ರಸನ್ನ ಕುಮಾರ್ ನಾಗಶ್ರೀ, ಗಣರಾಜ್ ಭಟ್,  ಸಹಹೃದಯ ಬಳಗದ  ರವೀಂದ್ರ ನಾಯಕ್, ಅವಿನಾಶ್, ಮೃತ್ಹುಂಜಯ ರಿತ್ತಿ ಮಠ, ರಾಜೇಶ್ ಪಿ, ಶಂಕರಯ್ಯ ಹಿರೇಮಠ, ಅಕ್ಷತಾ ಕಾರ್ಕಳ, ದೇವದಾಸ್ ಕಾಮತ್  ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here