Friday, June 13, 2025
HomeUncategorizedಕಾಶಿ ಸಮಾರಾಧನೆ -ಸತ್ಕಾರ -ಸನ್ಮಾನ

ಕಾಶಿ ಸಮಾರಾಧನೆ -ಸತ್ಕಾರ -ಸನ್ಮಾನ

ಕಾವು -ಮಾಡ್ನೂರು ಗ್ರಾಮದ ಮಳಿ ರಾಮಚಂದ್ರ ಭಟ್ ಅವರು ಸಪತ್ನೀಕರಾಗಿ ತನ್ನ ಆತ್ಮೀಯ ಬಳಗದೊಡನೆ ಅಯೋದ್ಯೆ-ಪ್ರಯಾಗ-ಕಾಶಿ ಕ್ಷೇತ್ರ ಪ್ರವಾಸ ಕೈಗೊಂಡಿದ್ದು ಆ ನಿಮಿತ್ತ ತನ್ನ ಪಡ್ಪು ನಿವಾಸದಲ್ಲಿ ಕಾಶಿ ಸಮಾರಾಧನೆ ಕಾರ್ಯಕ್ರಮ ನೆರವೇರಿಸಿದರು.

ಪೂರ್ವಾಹ್ನ ಮಹಾಗಣಪತಿ ಹವನ ಮಾಡಿ ತದನಂತರ ರುದ್ರಭಿಷೇಕ ಪೂರ್ವಕ ಶಿವರಾಧನೆ ಜರಗಿತು. ಪ್ರಸಾದ ವಿತರಣೆ ತರುವಾಯ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಂಧು ಮಿತ್ರರ ಸಮ್ಮುಖದಲ್ಲಿ ಪ್ರವಾಸದ ಜವಾಬ್ದಾರಿ ವಹಿಸಿದ್ದ ಬೆಂಗಳೂರಿನ ಟ್ರಾವೆಲ್ಸ್ ಫಾರ್ ಯು ನಿರ್ವಹಣಾಕಾರ ನೂಜಿಬಾಳ್ತಿಲದ ಬಾಲಕೃಷ್ಣ ಅವರನ್ನು ಸತ್ಕರಿಸುವ ಕಾರ್ಯಕ್ರಮ ನೆರವೇರಿತು.ಶ್ರೀ ಬಾಲಕೃಷ್ಣ ಅವರಿಗೆ ಸಮಾರಂಭದಲ್ಲಿ ಪೇಟ ತೊಡಿಸಿದ ಶಾಲು ಹೊದೆಶಿ ಸ್ಮರಣಿಕೆಯೊಡನೆ ಶ್ರೀ ರಾಮಚಂದ್ರ ಭಟ್ ಗೌರವಿಸಿದರು.

ಪ್ರವಾಸದ ನೇತೃತ್ವದ ವಹಿಸಿದ್ದ ಪುತ್ತೂರಿನ ಜಿ. ಕೆ. ಪ್ರಸನ್ನ ಅವರು ಕಾರ್ಯಕ್ರಮ ನಿರ್ವಹಿಸಿದರು. ಯಲ್. ಬಿ. ಪೆರ್ನಾಜೆಯವರು ಸ್ವಾಗತಿಸಿದರು. ಪುತ್ತೂರು ಫಿಲೋಮಿನಾ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಶ್ರೀ ಹರಿನಾರಾಯಣ ಮಾಡಾವು ಅವರು ಮತ್ತು ಕಾಡೂರು ಸೀತಾರಾಮ ಶಾಸ್ತ್ರಿಯವರು ಪ್ರವಾಸದ ಕುರಿತಾದ ತಮ್ಮ ಅನುಭವವನ್ನು ಹಂಚಿಕೊoಡರು. ಸನ್ಮಾನ ಭಾಜನರಾದ ಬಾಲಕೃಷ್ಣ ಅವರು ತನ್ನನ್ನು ಕರೆದು ಆದರಿಸಿ ಸನ್ಮಾನಿಸಿಸುದಕ್ಕೆ ಕೃತಜ್ಞತೆ ಅರ್ಪಿಸಿ ತನ್ನ ಸಂಸ್ಥೆಯ ಬಗೆಗೆ ವಿಶ್ವಾಸವಿರಿಸಿ ಸಂಸ್ಥೆಯ ಮೂಲಕ ಹೆಚ್ಚಿನ ಬಾರಿ ವಿವಿಧ ಪ್ರದೇಶಗಳಿಗೆ ಪ್ರವಾಸಗೈದ ವಿವಿಧ ಕಡೆಗಳ ಹವ್ಯಕ ಸಮಾಜದ ಮಹನೀಯರ ಪ್ರೋತ್ಸಾಹವನ್ನು ಸ್ಮರಿಸಿದರು.

ಕಾರ್ಯಕ್ರಮದ ನಂತರ ಪುಷ್ಕಳ ಭೋಜನ ವ್ಯವಸ್ಥೆ ಇತ್ತು. ಕಾರ್ಯಕ್ರಮದಲ್ಲಿ 250ಕ್ಕೂ ಮಿಕ್ಕಿ ಮಹನೀಯರು ಭಾಗವಹಿಸಿದ್ದರು. ಶ್ರೀ ರಾಮಚಂದ್ರ ಭಟ್ ಮತ್ತು ಅವರ ಶ್ರೀಮತಿ ಸಾವಿತ್ರಿ ಆರ್ ಭಟ್ ಅವರುಗಳಿಗೆ ಅವರ ಕುಟುಂಬ ಪರಿವಾರದವರು ಸಹಕರಿಸಿದರು.

RELATED ARTICLES
- Advertisment -
Google search engine

Most Popular