ಹೆಬ್ರಿ : ರಾಷ್ಟ್ರೀಯ ಹೆದ್ದಾರಿ ಕಾಮಗಾರಿ : ಹಲವೆಡೆ ಸಮಸ್ಯೆ : ಜಿಲ್ಲಾಧಿಕಾರಿ ಪರಿಶೀಲನೆ.
ತುರ್ತಾಗಿ ತಡೆಗೋಡೆ ನಿರ್ಮಾಣಕ್ಕೆ ಡಿಸಿ ಸೂಚನೆ.

0
158

ಹೆಬ್ರಿ : ಉಡುಪಿ ಹೆಬ್ರಿ ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿಯ ಹೆಬ್ರಿ ಶಿವಪುರದ ಬಿಲ್ಲುಬೈಲು ಎಂಬಲ್ಲಿ ಹೆದ್ದಾರಿ ನಿರ್ಮಾಣಕ್ಕೆ ಮಣ್ಣು ಅಗೆದಿದ್ದು ಇಲ್ಲಿನ ೫ ನಲಿಕೆ ಸಮುದಾಯದ ಮನೆಗಳಿಗೆ ತೆರಳುವ ರಸ್ತೆ ಸಂಪೂರ್ಣ ಮಳೆಗೆ ಕುಸಿದು ಬಿದ್ದಿದ್ದು ಸಂಚಾರ ಬಂದ್‌ ಆಗಿದೆ. ಹೆಬ್ರಿಯ ಕನ್ಯಾನದಲ್ಲೂ ರಸ್ತೆಯ ಅಂಚು ಕುಸಿಯುತ್ತಿದೆ. ಹೆದ್ದಾರಿಯಂಚಿನ ಮನೆಮಂದಿಗೆ ಸಂಕಷ್ಟ ಎದುರಾಗಿದೆ, ರಸ್ತೆಯಂಚಿನ ಮನೆಗಳು ಕುಸಿಯುವ ಭೀತಿಯಲ್ಲಿದ್ದು ತಡೆಗೋಡೆ ನಿರ್ಮಾಣ ಮಾಡಿ ರಕ್ಷಣೆ ನೀಡುವಂತೆ ಸಮಾಜಸೇವಕ ಬೈಕಾಡಿ ಮಂಜುನಾಥ ರಾವ್‌ ಶಿವಪುರ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದರು. ರಾಷ್ಟ್ರೀಯ ಹೆದ್ದಾರಿಯ ಪೆರ್ಡೂರು ಪಕ್ಕಾಲಿನಿಂದ ಹೆಬ್ರಿಯ ತನಕ ರಸ್ತೆಯಂಚು ಕುಸಿಯುತ್ತಿದ್ದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಬುಧವಾರ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಕುಸಿಯುವ ಹಂತದಲ್ಲಿರುವ ಶಿವಪುರ ಬಿಲ್ಲುಬೈಲಿನ ಮನೆ ಮತ್ತು ರಸ್ತೆಯ ಪಕ್ಕ ತುರ್ತಾಗಿ ತಡೆಗೋಡೆ ನಿರ್ಮಾಣ ಮಾಡಲು ಸೂಚನೆ ನೀಡಲಾಗಿದೆ. ಕುಸಿಯುವ ಭೀತಿಯಲ್ಲಿರುವ ಎಲ್ಲಾ ಸ್ಥಳಗಳನ್ನು ಸರ್ವೆ ನಡೆಸಿ ಶೀಘ್ರವಾಗಿ ವರದಿ ಸಲ್ಲಿಸಿ ಅನುಮೋಧನೆ ಪಡೆದು ತಡೆಗೋಡೆ ನಿರ್ಮಾಣಕ್ಕೆ ಸೂಚಿಸಲಾಗಿದೆ. ಮಳೆಯಿಂದಾಗಿ ತುರ್ತು ಪರಿಹಾರ ಕಾರ್ಯಕ್ಕೆ ಸಮಸ್ಯೆಯಾಗುತ್ತಿದೆ. ಹೆದ್ದಾರಿ ನಿರ್ಮಾಣ ಕಾರ್ಯ ವೇಗದಲ್ಲಿ ನಡೆಯುತ್ತಿದೆ, ಕೆಲವರು ಜಮೀನಿನ ಬಗ್ಗೆ ನ್ಯಾಯಲಯದ ತಡೆಯಾಜ್ಞೆ ತಂದಿರುವ ಹಿನ್ನಲೆಯಲ್ಲಿ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದರು. ಹೆಬ್ರಿ ತಹಶೀಲ್ಧಾರ್‌ ಎಸ್.ಎ.ಪ್ರಸಾದ್‌, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿ ಮಂಜುನಾಥ ನಾಯಕ್‌, ಕಂದಾಯ ಮತ್ತು ಹೆದ್ದಾರಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here