
ಮೂಡುಬಿದಿರೆ : ತಾಲೂಕಿನ ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜೋಗೊಟ್ಟು ಎಂಬಲ್ಲಿ ವ್ಯಕ್ತಿಯೋವ೯ರು ಕಾಲು ಜಾರಿ ನೀರಿಗೆ ಬಿದ್ದ ಘಟನೆ ನಡೆದಿದೆ.
ವಾಲ್ಪಾಡಿಯ ಆನೆಗುಡ್ಡೆ ಬಳಿಯ ಶ್ರೀನಿವಾಸ್ ಭಟ್ ಎಂಬವರ ಪುತ್ರ ಗುರುಪ್ರಸಾದ್ ಭಟ್ (36ವ) ನೀರಿಗೆ ಬಿದ್ದವರು.
ಜೋಗೊಟ್ಟು ಬಳಿಯ ಪಡ್ಡಾಯಿಮಜಲು ಎಂಬಲ್ಲಿರುವ ಅಣೆಕಟ್ಟಿನಲ್ಲಿ ನೀರು ತುಂಬಿಕೊಂಡಿತ್ತು ಇದರಲ್ಲಿ ಸಿಲುಕಿಕೊಂಡಿರುವ ಕಸವನ್ನು ತೆಗೆಯಲೆಂದು ಬದಿಗೆ ಇಳಿದ ಸಂದಭ೯ದಲ್ಲಿ ಕಾಲು ಜಾರಿ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದಾರೆ.
ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಯವರು ಶೋಧನಾ ಕಾರ್ಯ ನಡೆಸಿ ರಾತ್ರಿಯಾದದ್ದರಿಂದ ಮೇಲಕ್ಕೆ ಬಂದಿದ್ದು ನಾಳೆ ಮತ್ತೆ ಕಾಯ೯ಚರಣೆ ನಡೆಸಲಿದ್ದಾರೆ.