ಮೊಗ್ರು :ಜೂ 02 ಜೈ ಶ್ರೀ ರಾಮ್ ಸೇವಾ ಟ್ರಸ್ಟ್ (ರಿ) ಅಲೆಕ್ಕಿ – ಮುಗೇರಡ್ಕ -ಮೊಗ್ರು. ಇದರ ಶ್ರೀರಾಮ ಶಿಶು ಮಂದಿರದ ಪ್ರವೇಶೋತ್ಸವ ಮತ್ತು ಗಣಹೋಮ

0
186

ಮೊಗ್ರು : ಜೂ 02 ಜೈ ಶ್ರೀ ರಾಮ್ ಸೇವಾ ಟ್ರಸ್ಟ್ (ರಿ.) ಅಲೆಕ್ಕಿ – ಮುಗೇರಡ್ಕ -ಮೊಗ್ರು
ಶ್ರೀರಾಮ ಶಿಶು ಮಂದಿರದ ಪ್ರವೇಶೋತ್ಸವ ಮತ್ತು ಗಣಹೋಮ,ಮಕ್ಕಳ ಹೊರಾಂಗಣ ಆಟಿಕೆ ಮೈದಾನ, ರಾಷ್ಟ್ರ ಧ್ವಜ ಸ್ತಂಭ , ಭಗವಧ್ವಜ ಕಂಬ,ಶುದ್ಧ ಕುಡಿಯುವ ನೀರಿನ ಪ್ಯೂರಿಫೈಯರ್ ಉದ್ಘಾಟನೆ ಹಾಗೂ ಉಚಿತ ಬ್ಯಾಗ್ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮ ನೆರವೇರಿತು.

ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ದೀಪ ಪ್ರಜ್ವಲನೆ ಮಾಡಿ ಧ್ವಜ ಕಂಬ ಉದ್ಘಾಟಿಸಿ ಶುಭಹಾರೈಸಿದರು, ಉಜಿರೆ ಲಕ್ಷ್ಮಿ ಇಂಡಸ್ಟ್ರೀಸ್ ಮೋಹನ್ ಕುಮಾರ್ ರವರು ಮಕ್ಕಳ ಹೊರಾoಗಣ ಆಟಿಕೆ ಉದ್ಘಾಟಿಸಿದರು,ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗರವರು ಶುದ್ಧ ಕುಡಿಯುವ ನೀರಿನ ಪ್ಯೂರಿಫೈಯರ್ ಲೋಕಾರ್ಪಣೆ ಗೊಳಿಸಿದರು, ಉದಯಭಟ್ ಕೊಳಬ್ಬೆ ಅಧ್ಯಕ್ಷತೆ ವಹಿಸಿದ್ದರು. ಪದ್ಮುಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸೀತಾರಾಮ ಮಡಿವಾಳ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ವೆಂಕಟರಮಣ ಭಟ್, ಪುತ್ತೂರು ಕಬಕ ಪುರೋಹಿತರಾದ ದೇವರಾತ ಭಟ್, ಪ್ರಗತಿ ಪರ ಕೃಷಿಕರಾದ ಚಂದ್ರಹಾಸ ಗೌಡ ದೇವಸ್ಯಗುತ್ತು, ಪ್ರಗತಿ ಪರ ಕೃಷಿಕರಾದ ದೇವಿಪ್ರಸಾದ್ ಕಡಮ್ಮಾಜೆ ಫಾರ್ಮ್ಸ್, ಬಂದಾರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರು ಹಾಲಿ ಸದಸ್ಯರಾದ ಗಂಗಾಧರ ಪೂಜಾರಿ, ಬಂದಾರು ಗ್ರಾಮ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಪೋಷಕ ವೃಂದ, ಟ್ರಸ್ಟ್ ಪದಾಧಿಕಾರಿಗಳು ಹಾಗೂ ಮಾತೃ ಮಂಡಳಿ, ಮಾತಾಜಿಯವರು,ಗ್ರಾಮಸ್ಥರು ಉಪಸ್ಥಿತರಿದ್ದರು. ಭರತೇಶ್ ಪುಣ್ಕೆದಡಿ ಸ್ವಾಗತಿಸಿ ಮಾತಾಜಿ ಪುಷ್ಪಲತ ನಿರೂಪಿಸಿ
ಉದಯಭಟ್ ಕೊಳಬ್ಬೆ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here