ದ ಕ ಜಿ ಪ ಉನ್ನತಿಕರಿಸಿದ(ಪಿಎಂ ಶ್ರೀ) ಸರಕಾರಿ ಶಾಲೆ ಕೆ ಎಸ್ ರಾವ್ ನಗರ ಇದರ 2025-26 ನೇ ಸಾಲಿನ ತರಗತಿಗಳು ಅದ್ದೂರಿ ಪ್ರಾರಂಭೋತ್ಸವ ಕಾರ್ಯಕ್ರಮ ಜರಗಿತು ಎಲ್ಕೆಜಿ ಹಾಗೂ ಒಂದನೇ ತರಗತಿಯ ಹೊಸ ಮಕ್ಕಳಿಗೆ ಮುಲ್ಕಿಯ ಪ್ರಥಮ ಪ್ರಜೆ ಶ್ರೀಯುತ ಸತೀಶ್ ಅಂಚನ್ ಉಪಾಧ್ಯಕ್ಷೆ ಲಕ್ಷ್ಮಿ , ಲಯನ್ ವೆಂಕಟೇಶ ಹೆಬ್ಬಾರ್ ಪ್ರತಿಭಾ ಹೆಬ್ಬಾರ್ ಹೂ ನೀಡಿ ತರಗತಿಗೆ ಸ್ವಾಗತಿಸಲಾಯಿತು ತರುವಾಯ ಸಭಾ ಕಾರ್ಯಕ್ರಮ ಜರಗಿ ಸರಕಾರದಿಂದ ನೀಡಿದ ಪಠ್ಯಪುಸ್ತಕಗಳನ್ನು ಗಣ್ಯರಿಂದ ವಿತರಿಸಲಾಯಿತು.
ಪ್ರಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಮುಖ್ಯೋಪಾಧ್ಯಾಯರಾದ ದಿನೇಶ್ ಕೆ ಸ್ವಾಗತಿಸಿದರು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಲ್ಕಿ ನಗರ ಪಂಚಾಯತ್ ನ ಅಧ್ಯಕ್ಷರಾದ ಶ್ರೀಯುತ ಸತೀಶ್ ಅಂಚನ್ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಶುಭ ಹಾರೈಸಿದರು ಮುಖ್ಯ ಅತಿಥಿಗಳಾಗಿ ಆಗಮಿಸಿದ ಲಯನ್ ವೆಂಕಟೇಶ ಹೆಬ್ಬಾರ್ ಪ್ರಾಂತ್ಯ ಅಧ್ಯಕ್ಷರು ಮಕ್ಕಳಿಗೆ 25-26 ಶೈಕ್ಷಣಿಕ ವರ್ಷಕ್ಕೆ ಶುಭ ಹಾರೈಸುತ್ತ ಮುಲ್ಕಿ ತಾಲೂಕಿನಲ್ಲಿ ಅತ್ಯಂತ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಸರಕಾರಿ ಶಾಲೆ ಹಾಗೂ ಮುಲ್ಕಿ ತಾಲೂಕಿನ ಏಕೈಕ ಪಿಎಂಶ್ರೀ ಶಾಲೆ ಪ್ರಸ್ತುತ ಉತ್ತಮ ಶಿಕ್ಷಕರನ್ನು ಹೊಂದಿದ್ದು ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಎಲ್ ಕೆ ಜಿ ಯು ಕೆ ಜಿ ಇಂದಲೇ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲು ಸರ್ವ ತಯಾರಿಯನ್ನು ಮಾಡಿಕೊಂಡಿದ್ದು ಪರಿಸರದ ಜನರು ಇದರ ಪ್ರಯೋಜನವನ್ನು ಪಡೆಯಬೇಕು ಅಲ್ಲದೆ ಪರಿಸರದ ಸಂಘ ಸಂಸ್ಥೆಗಳು ಹಾಗೂ ಕಂಪನಿಗಳು ಸಾಧ್ಯವಾದ ಮಟ್ಟಿಗೆ ಈ ಶಾಲೆಗೆ ಸಹಕಾರವನ್ನು ನೀಡಿ ರಾಜ್ಯದಲ್ಲಿ ಉತ್ತಮ ಶಾಲೆಯಾಗಿ ಮೂಡಿಬರಲು ಸಹಕರಿಸಬೇಕಾಗಿ ವಿನಂತಿಸಿದರು ತರುವಾಯ ಮಕ್ಕಳಿಗೆ ಸಿಹಿ ತಿಂಡಿ ಹಂಚಲಾಯಿತು ಕಾರ್ಯಕ್ರಮದಲ್ಲಿ ನಗರ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ಮುಖ್ಯ ಶಿಕ್ಷಕರಾದ ಶ್ರೀಯುತ ದಿನೇಶ್ ಕೆ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಲೈನ್ಸ್ ಕ್ಲಬ್ ಬಪ್ಪನಾಡು ಕಾರ್ಯದರ್ಶಿ ಪ್ರತಿಭಾ ಹೆಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಶಿಕ್ಷಕೈ ಶ್ರೀಮತಿ ಸುಭಾಷಿಣಿ ನಿರೂಪಿಸಿದರು ಹಿರಿಯ ಶಿಕ್ಷಕಿ ಶ್ರೀಮತಿ ಸುಜಾತ ಧನ್ಯವಾದ ಅರ್ಪಿಸಿದರು