ಮೂಲ್ಕಿ ಕಾರ್ನಾಡ್ ಶ್ರೀ ಹರಿಹರ ಕ್ಷೇತ್ರದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿಜೃಂಭಣೆಯ ದೃಢ ಕಲಶಾಭಿಷೇಕ

0
179

ಮೂಲ್ಕಿ ಕಾರ್ನಾಡ್ ಶ್ರೀ ಹರಿಹರ ಕ್ಷೇತ್ರದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ದೃಢ ಕಲಶಾಭಿಷೇಕ ಬುಧವಾರ ಬೆಳಿಗ್ಗೆ 8:30 ರ ಮಿಥುನ ಲಗ್ನ ಸುಮೂಹೂರ್ತದಲ್ಲಿ ಶ್ರೀ ದೇವರಿಗೆ ದೃಢಕಲಶಾಭಿಷೇಕ ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ ಹಾಗೂ ಅರ್ಚಕ ಹಯಗ್ರೀವ ಪಡ್ಡಿಲ್ಲಾಯ ನೇತೃ‌ತ್ವದಲ್ಲಿ ನಡೆಯಿತು.

ಈ ಸಂದರ್ಭ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ ಎಚ್ ಅರವಿಂದ ಪೂಂಜ, ಜೀರ್ಣೋದ್ಧಾರ ಸಮಿತಿಯ ಸುನಿಲ್ ಆಳ್ವ, ವೈ ಎನ್ ಸಾಲ್ಯಾನ್, ಹರ್ಷರಾಜ ಶೆಟ್ಟಿ, ಮಧು ಆಚಾರ್ಯ, ಹರಿಶ್ಚಂದ್ರ ಪಿ ಸಾಲ್ಯಾನ್, ಸುರೇಶ್ ರಾವ್, ಜೀವನ್ ಶೆಟ್ಟಿ, ಕೃಷ್ಣ ಶೆಟ್ಟಿ, ಪ್ರವೀಣ್ ಕೋಟ್ಯಾನ್, ಕೃಷ್ಣದೇವಾಡಿಗ, ದಿವಾಕರ ಕೋಟ್ಯಾನ್, ಕಿಶೋರ್, ಉದಯ ಶೆಟ್ಟಿ ಕಾರ್ನಾಡ್, ಹರಿಹರ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಶಶೀಂದ್ರ ಸಾಲ್ಯಾನ್, ರವಿಕುಮಾರ್, ರಾಘವೇಂದ್ರ ರಾವ್, ನೂತನ್ ಶೆಟ್ಟಿ ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್, ವಿದ್ವಾನ್ ನಾಗೇಶ್ ಬಪ್ಪನಾಡು, ಪುರಂದರ ಸಾಲ್ಯಾನ್, ರಂಗನಾಥ ಶೆಟ್ಟಿ, ಶಿವರಾಮ್ ಜಿ ಅಮೀನ್, ಶರತ್ ಕುಬೆವೂರು, ಸುದೀರ್ ಕೋಟ್ಯಾನ್, ಭವಾನಿ ಶಂಕರ್, ಉದಯ ಕುಮಾರ್, ಗೋಪಿನಾಥ್ ಪೂಜಾರಿ, ನಿವೃತ
ಪ್ರಾಂಶುಪಾಲರು ವಿಷ್ಣುಮೂರ್ತಿ, ಶಶಿಂದ್ರ ಅಮೀನ್, ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬ್ರಹ್ಮಕಲಶದ ವಿಧಿವಿಧಾನಗಳನ್ನು ನೆರವೆರಿಸಿದ ಶಿಬರೂರು ಗೋಪಾಲ ಕೃಷ್ಣ ತಂತ್ರಿಯವರನ್ನು ಅರವಿಂದ ಪೂಂಜರು ಗೌರವಿಸಿ ಬ್ರಹ್ಮಕಲಶದ ಎಲ್ಲಾ ವಿಧಿವಿಧಾನಗಳನ್ನು ಒಳ್ಳೆಯ ರೀತಿಯಿಂದ ನೆರವೇರಿಸಿ ಕೊಟ್ಟಂತ ತಂತ್ರಿಯವರಿಗೆ ಕೃತಜ್ಞತೆಯನ್ನು ಹೇಳಿದರು. ಪದಾಧಿಕಾರಿಗಳಿಗೂ ಕೃತಜ್ಞತೆ ಸಲ್ಲಿಸಿದರು. ಅದರಂತೆ ಬ್ರಹ್ಮಕಲಶಕ್ಕೆ ಸಹಕರಿಸಿದ ಎಲ್ಲಾ ಭಕ್ತರನ್ನು ಸಂಘ ಸಂಸ್ಥೆಯ ಬ್ರಹ್ಮಕಲಶದ ಸವಿಸ್ತಾರ ವರದಿಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿದ ಪತ್ರಕರ್ತರಿಗೆ ವಂದಿಸಿ ಮುಂದೆ ದೇವಸ್ಥಾನದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕಾಗಿ ಹೇಳಿದರು.

LEAVE A REPLY

Please enter your comment!
Please enter your name here