ಶಿವಗಿರಿ ಕೂ ಆಫ್ ಕ್ರೆಡಿಟ್ ಸೊಸೈಟಿ ಹಾಗು ಬಿಲ್ಲವರ ಅಸೋಸಿಯೇಷನ್ ನ ಸಹಯೋಗದೊಂದಿಗೆ ಉಚಿತ ನೋಟ್ ಪುಸ್ತಕ ವಿತರಣೆ

0
189

ಶಿವಗಿರಿ ಕೂ ಆಫ್ ಕ್ರೆಡಿಟ್ ಸೊಸೈಟಿ ಹಾಗು ಬಿಲ್ಲವರ ಅಸೋಸಿಯೇಷನ್ ನ ಸಹಯೋಗದೊಂದಿಗೆ ದಿನಾಂಕ 01/06/2025ರಂದು ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಯನ್ನು ಸೊಸೈಟಿಯ ಕಾರ್ಯಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅತಿಥಿಗಳಾಗಿ ಡೆಕ್ಕನ್ ಆಸ್ಪತ್ರೆಯ ಖ್ಯಾತ ವೈದ್ಯ ರಾದಂತಹ ರಮೇಶ್ ದೊಡ್ಡನ್ನವವರ್,ಜಿ ಜಿ ಚಿತ್ನಿಸ್ ಸ್ಕೂಲ್ ನ ಪ್ರಾಂಶುಪಾಲರಾದ ನವೀನ ಶೆಟ್ಟಿಗಾರ್ ಮತ್ತು ಶಹಾಪುರ ಠಾನೆಯ ಸಬ್ ಇನ್ಸ್ ಪೆಕ್ಟರ್ ಮಣಿಕಂಠ ಪೂಜಾರಿ ಆಗಮಿಸಿದ್ದರು. ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ dr ರಮೇಶ್ ದೊಡ್ಡಣ್ಣವರ ವಿಧ್ಯಾರ್ಥಿ ಗಳನ್ನು ಉದ್ದೇಶಿಸಿ ಮಾತನಾಡಿ ಟಿವಿ ಹಾಗು ಮೊಬೈಲ್ ನಿಂದಾ ದೂರ ಇದ್ದು ತಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಿ ಹಾಗು ಹೆಚ್ಚು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳ್ಳಿ ಎಂದರು ಇನ್ಸ ಪೆಕ್ಟರ್ ಮಣಿಕಂಠ ಪೂಜಾರಿಯವರು ಟಿವಿ ಹಾಗು ಮೊಬೈಲ್ ನಿಂದಾ ವಿದ್ಯಾರ್ಥಿಗಳು ದೂರ ಇರುವಂತೆ ಸಲಹೆ ನೀಡಿ ವಿದ್ಯಾರ್ಥಿಗಳು ಒತ್ತಡ ವಿಲ್ಲದೆ ತಮ್ಮ ಅಭ್ಯಾಸದ ಮೂಲಕ ತಮ್ಮ ಗುರಿ ಮುಟ್ಟಬೇಕು ಪೋಷಕರು ಯವುದೇ ಒತ್ತಡವನ್ನು ವಿದ್ಯಾರ್ಥಿಗಳ ಮೇಲೆ ಹಾಕಬಾರದು ಎಂದರು ನವೀನ ಶೆಟ್ಟಿಗಾರ್ ಮಾತನಾಡಿ ಸಂಸ್ಥೆಯ ಕಾರ್ಯಕ್ರಮವನ್ನು ಪ್ರಶಂಸಿಸಿ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ರಾದ ಪ್ರಕಾಶ್ ಪೂಜಾರಿ ಮಾತನಾಡಿ ಮಕ್ಕಳ ಮೇಲೆ ಪೋಷಕರು ಯವುದೇ ಒತ್ತಡ ಹೇರಿದೆ ಅವರ ಇಚ್ಚೆಯನ್ನು ಅರಿತು ಅವರನ್ನು ಪ್ರೋತ್ಸಾಹಿಸಿ ಎಂದರು. ಕೊನೆಯಲ್ಲಿ ಸೊಸೈಟಿ ಯ ಅಧ್ಯಕ್ಷ ರಾದ ಸುಜನ್ ಕುಮಾರ್ ಮಾತನಾಡಿ ಸಂಸ್ಥೆಯಿಂದ ದೊರೆಯುವ ಸೌಲಭ್ಯವನ್ನು ಪಡೆದುಕೊಳ್ಳಿ ಹಾಗು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸಂಸ್ಥೆ ಸದಾ ಸಿದ್ಧವಿದೆ ಎಂದು ಹೇಳಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸುಂದರ್ ಕೋಟಿಯನ್ ಉಪಸ್ಥಿತರಿದ್ದರು . ಕಾರ್ಯಕ್ರಮದಲ್ಲಿ ಬಿಲ್ಲವ ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರು ಸೊಸೈಟಿ ಯ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು ಪಿಗ್ಮಿ ಸಂಗ್ರಹಕಾರರು ಹಾಜರಿದ್ದರು. ಸುಮಾರು ನೂರಾ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಿದ್ದು ಪುಸ್ತಕಗಳನ್ನು ಪಡೆದುಕೊಂಡರು. ವ್ಯವಸ್ಥಾಪರಾದ ಚಂದ್ರ ಎಚ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here