ಯೋಗ ಸ್ಪರ್ಧೆಯಲ್ಲಿ ವಿದ್ಯೋದಯ ಶಾಲಾ ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆ

0
700


CISCE ರಾಷ್ಟ್ರೀಯ ಕ್ರೀಡೆ ಮತ್ತು ಕ್ರೀಡಾಕೂಟ 2025–2026 ವಲಯ ಮಟ್ಟದ ಯೋಗ ಸ್ಪರ್ಧೆ (Z1) – ದಕ್ಷಿಣ ಕನ್ನಡ ಜಿಲ್ಲೆ ಪ್ರಾಯೋಜಿತ ಸುಳ್ಯದ ಮಾರುತಿ ಅಂತರರಾಷ್ಟ್ರೀಯ ಶಾಲೆಯಲ್ಲಿ ವಲಯ ಮಟ್ಟದ ಯೋಗ ಸ್ಪರ್ಧೆಯನ್ನು ಜೂನ್ 11, 2025 ರಂದು ನಡೆಸಲಾಗಿತ್ತು. ಉಡುಪಿಯ ವಿದ್ಯೋದಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು‌.ಇದರಲ್ಲಿ 14 ವರ್ಷದೊಳಗಿನ ಯೋಗಪಟುಗಳ ವಿಭಾಗದಲ್ಲಿ‌ ಶಾಲಾವಿದ್ಯಾರ್ಥಿನಿಯರಾದ ಶಿವಾನಿ ಶೆಟ್ಟಿ ಲಯಬದ್ಧ ಯೋಗ ಮತ್ತು ಸಾಂಪ್ರದಾಯಿಕ ಯೋಗ ಎರಡರಲ್ಲೂ ಪ್ರಥಮ ಸ್ಥಾನ ಪಡೆದರು. ಈ ಹಿಂದೆಯೂ ಶಿವಾನಿ ಶೆಟ್ಟಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಸಾಂಪ್ರದಾಯಿಕ ಯೋಗದಲ್ಲಿ ಸಂಯುಕ್ತಾ 4 ನೇ ಸ್ಥಾನ ಪಡೆದರು.
ಗುಂಪು ಸ್ಪರ್ಧೆಯಲ್ಲಿ, ಶಾಲಾ ತಂಡವು 1 ನೇ ರನ್ನರ್-ಅಪ್ ಆಗಿ ಹೊರಹೊಮ್ಮಿತು.ಹಾಗೂ 17 ವರ್ಷದೊಳಗಿನ ಯೋಗಪಟುಗಳ ವಿಭಾಗದಲ್ಲಿ ಶಾಲಾ ವಿದ್ಯಾರ್ಥಿನಿಯರಾದ
ದಿಯಾ ಜಿ ಲಯಬದ್ಧ ಯೋಗ ಮತ್ತು ಸಾಂಪ್ರದಾಯಿಕ ಯೋಗ ಎರಡರಲ್ಲೂ ಪ್ರಥಮ ಸ್ಥಾನ, ಸೋಹಾನಿ 3 ನೇ ಸ್ಥಾನ ಮತ್ತು ಸಾಂಪ್ರದಾಯಿಕ ಯೋಗದಲ್ಲಿ ಸಿಂಚನಾ 4 ನೇ ಸ್ಥಾನ ಪಡೆದರು.ಅತ್ಯುತ್ತಮ ಸ್ಥಾನ ಪಡೆದ ಈ ವಿದ್ಯಾರ್ಥಿಗಳೆಲ್ಲರೂ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

17 ವರ್ಷದೊಳಗಿನವರ ತಂಡವು ಚಾಂಪಿಯನ್‌ಶಿಪ್ ಟ್ರೋಫಿಯನ್ನು ಪಡೆದು ಶಾಲೆಯ ಹೆಗ್ಗಳಿಕೆಗೆ ಪಾತ್ರರಾದರು.ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಅನಿತಾ ಪ್ರಭಾತ್ ರಾಜ್, ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಮತಿ ದೀಪಾ ಗಂಗಾಧರ್ ಮತ್ತು ಶ್ರೀ ವಾಸು ನಾಯ್ಕ್ ವಿದ್ಯಾರ್ಥಿಗಳನ್ನು ಸಾಧನೆಯನ್ನು ಮೆಚ್ಚಿ ಅಭಿನಂದಿಸಿದರು.

LEAVE A REPLY

Please enter your comment!
Please enter your name here