ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಯೋಗ ದಿನಾಚರಣೆ

0
86


ಮೂಡುಬಿದಿರೆ: ವಿಶ್ವಕ್ಕೆ ಭಾರತೀಯರ ಅಮೂಲ್ಯ ಕೊಡುಗೆ ಯೋಗ. ವಿದ್ಯಾರ್ಥಿಗಳು ಯೋಗಭ್ಯಾಸ ಮಾಡುವುದರಿಂದ ದೈನಂದಿನ ಕಾರ್ಯಗಳು ಸುಲಲಿತವಾಗಿ ಸಾಗುತ್ತದೆ. ಯೋಗವನ್ನು ಕೇವಲ ಚಟುವಟಿಕೆ ಆಗಿ ಸ್ವೀಕರಿಸದೆ ದೈನಂದಿನ ಜೀವನ ಶೈಲಿಯಾಗಿ ಸ್ವೀಕರಿಸಬೇಕು ಎಂದು ಮೂಡುಬಿದಿರೆಯ ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಹೇಳಿದರು.
ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಅಂತಾರಾಷ್ಟಿçÃಯ ಯೋಗ ದಿನವನ್ನು ಉದ್ಘಾಟಿಸಿ ಮಾತನಾಡಿದರು.
ಹಳೆಯ ವಿದ್ಯಾರ್ಥಿನಿ ದಿಶಾ ಪ್ರಶಾಂತ್ ಮಾತನಾಡಿ, ಯೋಗಭ್ಯಾಸಕ್ಕೆ ವಯಸ್ಸಿನ ಮಿತಿ ಇಲ್ಲ, ದೇಹ ಮತ್ತು ಮನಸ್ಸಿನ ಶುಚಿತ್ವಕ್ಕೆ ಯೋಗ ಬಲು ಸಹಕಾರಿ, ಪ್ರತಿಯೊಬ್ಬರು ತಮ್ಮ ದಿನನಿತ್ಯದ ಚಟುವಟಿಕೆ ಸುಗಮವಾಗಿ ಸಾಗಲು ಅಭ್ಯಸಿಸುವುದು ಉತ್ತಮ ಎಂದರು.
ಸAಸ್ಥೆಯ ಯೋಗ ತರಬೇತುದಾರೆ ದಿವ್ಯ ಎಂ. ಯೋಗದ ಮಹತ್ವವನ್ನು ತಿಳಿಸಿದರು.
ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್, ಸಿಬಿಎಸ್‌ಇ ಶಾಲಾ ಪ್ರಾಂಶುಪಾಲ ಶ್ರೀ ಪ್ರಸಾದ್, ಉಪ ಮುಖ್ಯ ಶಿಕ್ಷಕ ಜಯಶೀಲ, ಜೀವಶಾಸ್ತç ಉಪನ್ಯಾಸಕ ಪ್ರಶಾಂತ್ ಆರ್.,
ವಿದ್ಯಾರ್ಥಿ ಶಾಶ್ವತ್ ನಿರೂಪಿಸಿದರು.
ಸಂಸ್ಥೆಯ ವಿದ್ಯಾರ್ಥಿಗಳು ಯೋಗ ಮತ್ತು ಯೋಗ ನೃತ್ಯ ಪ್ರದರ್ಶಿಸಿದರು.

LEAVE A REPLY

Please enter your comment!
Please enter your name here