ಮೂಡುಬಿದಿರೆ:ತಾಲೂಕಿನ ಭಜನಾ ಪರಿಷತ್ ಸಭೆಯು ಮೂಡಬಿದಿರೆಯ ಯೋಜನಾ ಕಚೇರಿಯಲ್ಲಿ ಮಂಗಳವಾರ ನಡೆಯಿತು.
ತಾಲೂಕು ಭಜನಾ ಪರಿಷತ್ತ್ ನ ಅಧ್ಯಕ್ಷರಾದ ಲಕ್ಷ್ಮಣ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.
ಭಜನಾ ಪರಿಷತ್ತಿನ ನಿರ್ದೇಶಕ ದಿನೇಶ್ ಡಿ ಭಜನಾ ಕಮ್ಮಟ ಹಾಗೂ ಭಜನೆಯ ಕುರಿತು ಮಾರ್ಗದರ್ಶನ ನೀಡಿದರು.
ಧರ್ಮಸ್ಥಳ ಯೋಜನೆಯ ಯೋಜನಾಧಿಕಾರಿ ಧನಂಜಯ್ , ಭಜನಾ ಪರಿಷತ್ತಿನ ಸಮನ್ವಯ ಅಧಿಕಾರಿ ಸಂತೋಷ್ ಅಲಿಯೂರು ನಿಕಟಪೂರ್ವ ಅಧ್ಯಕ್ಷ ಅಶೋಕ್ ನಾಯ್ಕ್ ಕಳಸಬೈಲ್ ಹಾಗೂ ಎಲ್ಲ ವಲಯದ ಭಜನಾ ಪರಿಷತ್ತಿನ ಅಧ್ಯಕ್ಷರುಗಳು,ಪದಾಧಿಕಾರಿಗಳು ಉಪಸ್ಥಿತರಿದ್ದರು.
ಯೋಜನಾಧಿಕಾರಿ ಧನಂಜಯ್ ಸ್ವಾಗತಿಸಿ, ಚಿತ್ತಾಡಿ ವಲಯದ ಮೇಲ್ವಿಚಾರಕಿ ಪುಷ್ಪ ನಿರೂಪಿಸಿ, ಪುತ್ತಿಗೆ ವಲಯದ ಮೇಲ್ವಿಚಾರಕ ಕೃಷ್ಣಪ್ಪ ಎಂ ಧನ್ಯವಾದಗೈದರು.