ಪಡುಬಿದ್ರಿ ದೇವಳದ ಪುನರ್ ನಿರ್ಮಾಣ ನಿವೇದನಾ ಪತ್ರ ಬಿಡುಗಡೆ

0
29

ಪಡುಬಿದ್ರಿ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ಭರದಿಂದ ಪುನರ್ ನಿರ್ಮಾಣಗೊಳ್ಳುತ್ತಿರುವ ಪಡುಬಿದ್ರಿಯ ಗ್ರಾಮ ದೇವಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ಜೀರ್ಣೋದ್ಧಾರ ಕಾರ್ಯದಲ್ಲಿ ಗ್ರಾಮದ ಪ್ರತಿಯೊಬ್ಬರೂ ಪಾಲ್ಗೊಳ್ಳುವ ಸಲುವಾಗಿ ಜೀರ್ಣೋದ್ಧಾರ ಸಮಿತಿ ವತಿಯಿಂದ ನಿವೇದನಾ ಪತ್ರವನ್ನು ಭಾನುವಾರ ಬಿಡುಗಡೆಗೊಳಿಸಲಾಯಿತು.

ಸಮಿತಿ ಉಪಾಧ್ಯಕ್ಷ ಪಿ.ರವೀಂದ್ರನಾಥ ಜಿ. ಹೆಗ್ಡೆ ಮಾತನಾಡಿ, ದೇವಳದ ಪುನರ್ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಗ್ರಾಮದ ಪ್ರತಿಯೊಬ್ಬರನ್ನೂ ಭೇಟಿ ಮಾಡಲಾಗುವುದು ಎಂದರು. ದೇವಳದ ಆನುವಂಶಿಕ ಮೊಕ್ತೇಸರ ಪಡುಬಿದ್ರಿ ಪೇಟೆಮನೆ ಭವಾನಿಶಂಕರ್ ಹೆಗ್ಡೆ ಮಾತನಾಡಿದರು. ದೇವಳದ ಕಾರ್ ನಿರ್ವಹಣಾಧಿಕಾರಿ ವೇದಮೂರ್ತಿ ರಾಜಗೋಪಾಲ ಆಚಾರ್ಯ, ಅರ್ಚಕ ವೈ. ಗುರುರಾಜ್ ಭಟ್, ಪ್ರಧಾನ ಕಾರ್ಯದರ್ಶಿ ಶ್ರೀನಾಥ್ ಹೆಗ್ಡೆ, ಸಮಿತಿ ಸದಸ್ಯ ಪ್ರಕಾಶ್ ದೇವಾಡಿಗ, ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ವೈ. ಪೂಜಾರಿ ಮಾತನಾಡಿದರು. ಪಡುಬಿದ್ರಿ ವ್ಯಾಪ್ತಿಯ ನಾನಾ ವಾರ್ಡ್‌ಗಳ ಸಮಿತಿ ರಚಿಸ ಲಾಯಿತು. ಪ್ರತಿಯೊಬ್ಬರೂ ದೇವರ ಕಾರ್ಯದಲ್ಲಿ ಭಾಗವಹಿಸುವಂತಾಗಲು ಶಿಲಾಸೇವೆಯ ವ್ಯವಸ್ಥೆ ಕಲ್ಪಿಸಲಾಗಿದೆ.

ಸಮಗ್ರ ಜೀರ್ಣೋದ್ಧಾರ ಕಾರ್ಯಗಳು ನಿಗದಿತ ಕಾಲದಲ್ಲಿ ಪೂರೈಸಿ 2026 ಏಪ್ರಿಲ್-ಮೇ ತಿಂಗಳಲ್ಲಿ ಪುನಃಪ್ರತಿಷ್ಠೆ ಬ್ರಹ್ಮಕಲಶೋತ್ಸವ ನಡೆಸಲು ಸಮಿತಿ ತೀರ್ಮಾನಿಸಿದೆ. ಗಣೇಶ್ ಕೋಟ್ಯಾನ್, ವೈ.ಸುಕುಮಾರ್, ವಿಷ್ಣುಮೂರ್ತಿ ಆಚಾರ್ಯ, ಪ್ರಕಾಶ್ ಶೆಟ್ಟಿ ಪಾದಬೆಟ್ಟು ಮಿಥುನ್ ಆರ್.ಹೆಗ್ಡೆ, ನವೀನ್ ಎನ್. ಶೆಟ್ಟಿ ಸುರೇಶ್ ಪಡುಬಿದ್ರಿ, ಗಿರಿಧರ್ ಪೂಜಾರಿ, ಎ.ಮಹೇಂದ್ರ ಅಭಿಪ್ರಾಯ ಮಂಡಿಸಿದರು. ಪಿ.ಆರ್.ನಾವಡ, ನವೀನ್ ಚಂದ್ರ ಜೆ.ಶೆಟ್ಟಿ, ಪಿ.ಕೆ.ಸದಾನಂದ, ಭಾಸ್ಕರ್ ಪಡುಬಿದ್ರಿ ಉಪಸ್ಥಿತರಿದ್ದರು. ರಾಮಚಂದ್ರ ಆಚಾರ್ ಕಾರ್ಯಕ್ರಮ ನಿರ್ವಹಿಸಿದರು. ಶ್ರೀನಾಥ್ ಹೆಗ್ಡೆ ವಂದಿಸಿದರು.

LEAVE A REPLY

Please enter your comment!
Please enter your name here