ತಪಸ್ಯ ಅಭಿನಯ ಕೇಂದ್ರ ಉದ್ಘಾಟನೆ

0
4

ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ನಲ್ಲಿ ವಿಧತ್ ಅಕಾಡೆಮಿ ಅರ್ಪಿಸುವ ತಪಸ್ಯ ಅಭಿನಯ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು
ಕಾರ್ಯಕ್ರಮವನ್ನು ತುಳುನಾಡ ಕಲಾ ಚತುರ ಕೇಶವ ಮಚ್ಚಿಮಲೆ ಜಿಲ್ಲಾ ತಾಲೂಕು ಮತ್ತು ರಾಜ್ಯ ಪ್ರಶಸ್ತಿ ವಿಜೇತರು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ ಶಿಕ್ಷಕರು ಸುದ್ದಿ ಬಿಡುಗಡೆ ಪ್ರತಿಭಾರಂಗ ಅಂಕಣಕಾರರು ನಾರಾಯಣ ರೈ ಕುಕ್ಕುವಳ್ಳಿ ವಹಿಸಿದ್ದರು ಹಾಗೆ ವೇದಿಕೆಯಲ್ಲಿ
ಪಿರ್ಕಿಲು ತುಳು ಚಲನಚಿತ್ರದ ನಾಯಕ ನಟ ಹಾಗೂ ಕಿರುತೆರೆಯ ನಟ ಸುದೇಶ್ ರೈ, ರಂಗ ನಿರ್ದೇಶಕರು ರಂಗಾಯಣ ರಾಕೇಶ್, ವಿದತ್ ಅಕಾಡೆಮಿ ಪುತ್ತೂರು ಇದರ ಸಂಸ್ಥಾಪಕರು ಶ್ರೀವಾತ್ಸ್, ರಂಗ ನಿರ್ದೇಶಕರು ಪತ್ರಕರ್ತರು ಆಗಿರುವ ಮೌನೇಶ್ ಆಚಾರ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.


ತಪಸ್ಯ ಅಭಿನಯ ಕೇಂದ್ರದ ಸಂಚಾಲಕರು ಕೀರ್ತನ್ ಶೆಟ್ಟಿ ಸುಳ್ಯ ಸ್ವಾಗತಿಸಿ, ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆ, ಕಲ್ಲಡ್ಕ ಇಲ್ಲಿಯ ಸಹ ಶಿಕ್ಷಕರು ಜಯಪ್ರಸಾದ್ ಪ್ರಾರ್ಥಿಸಿ, ವಿದತ್ ಅಕಾಡೆಮಿಯ ಸಹ ಸಂಸ್ಥಾಪಕರಾದ ಕುಮಾರಿ ಕಾವ್ಯಶ್ರೀ ವಂದಿಸಿದರು. ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆ ಕಲ್ಲಡ್ಕ ಇಲ್ಲಿಯ ಸಹಶಿಕ್ಷಕಿ ಆಶಾ ಮಯ್ಯ ನಿರೂಪಿಸಿದರು.

LEAVE A REPLY

Please enter your comment!
Please enter your name here