ಮುಲ್ಕಿ: ಇಲ್ಲಿಗೆ ಸಮೀಪದ ಪಕ್ಷಿಕೆರೆ ಹರಿಪಾದೆ ಮುಪ್ಪವರನ್ ನಿವಾಸಿ ಖ್ಯಾತ ಪುರೋಹಿತ ಕೆ.ಬಿ. ವೆಂಕಟೇಶ್ ರಾವ್ (ಪೊಲ್ಲ ಭಟ್ರು) (73) ರವರು ಬುಧವಾರ ನಿಧನರಾದರು.
ಪಕ್ಷಿಕೆರೆ ಹರಿಪಾದೆ ಪರಿಸರದಲ್ಲಿ ಪುರೋಹಿತರು, ಪ್ರಶ್ನಾ ಚಿಂತನೆ, ದಾನ ಧರ್ಮದಿಗಳ ಮೂಲಕ ಜನಾನುರಾಗಿಯಾಗಿದ್ದರು. ಅವರ ನಿಧನಕ್ಕೆ ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀಶ್ರೀ ಚಂದ್ರಶೇಖರ ಸ್ವಾಮೀಜಿ, ಜ್ಯೋತಿಷ್ಯ ವಿದ್ವಾನ್ ವಿಶ್ವನಾಥ ಭಟ್, ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ, ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ಶಾಸಕ ಉಮಾನಾಥ ಕೋಟ್ಯಾನ್,ಮಾಜೀ ಸಚಿವ ಅಭಯ ಚಂದ್ರ ಜೈನ್, ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಉದ್ಯಮಿ ಅರವಿಂದ ಪೂಂಜಾ, ಕಾರ್ನಾಡ್ , ಪ್ರಕಾಶ್ ಶೆಟ್ಟಿ ಜಾರಂದಾಯ ದೈವಸ್ಥಾನ ಆಡಳಿತ ಮೊಕ್ತೇಸರರು ಹರಿಪಾದೆ, ಭಂಡಾರ ಮನೆ ಮಾದವ ಸಾಲಿಯಾನ್ ಮತ್ತು ಕುಟುಂಬಿಕರು, ಸ್ಥಳೀಯ ಸಂಘ ಸಂಸ್ಥೆ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಮಯ್ಯದ್ದಿ, ಪಂಚಾಯತ್ ಸದಸ್ಯರಾದ ಸುರೇಶ್ ಪಂಜ, ಕೇಶವ ಪೂಜಾರಿ,ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ್ ಬೆರ್ನಾಡ್, ನಿರಂಜನ್ ಹರಿಪಾದೆ, ಸುರೇಶ್ ಭಟ್ ಮಹಾಗಣಪತಿ ಮಂದಿರ, ಮತ್ತಿತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಅಂತ್ಯಸಂಸ್ಕಾರ ಇಂದು ಮಧ್ಯಾಹ್ನ 1.00ಗಂಟೆಗೆ ಹರಿಪಾದೆ ಶ್ರೀ ವೃಂದಾವನ ನಿವಾಸದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರು ಪತ್ನಿ , ಓರ್ವ ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.