ವಿಧಾನ ಪರಿಷತ್ತಿನ ಶಾಸಕ ಐವನ್‌ ಡಿʼಸೋಜಾರವರ ಅನುದಾನದಿಂದ ನಿರ್ಮಾಣವಾದ ಮಂಗಳೂರಿನ ಅಡಂಕುದ್ರುವಿನಲ್ಲಿ ರೂ.45.00ಲಕ್ಷ  ವೆಚ್ಚದಲ್ಲಿ ರಸ್ತೆ ಕಾಂಕ್ರೀಟೀಕಕಣ

0
14

ಮಂಗಳೂರಿನ ಅಡಂಕುದ್ರುವಿನಲ್ಲಿ ರೂ.45.00ಲಕ್ಷ  ವೆಚ್ಚದಲ್ಲಿ ರಸ್ತೆ ಕಾಂಕ್ರೀಟೀಕಕಣ ನಿರ್ಮಾಣ ಉದ್ಘಾಟಿಸಿ ಮಾತನಾಡಿದ ಪೆರ್ಮನ್ನೂರು ಚರ್ಚಿನ ಧರ್ಮಗುರುಗಳು ರೆ| ಫಾಧರ್‌ ಸಿಪ್ರಿಯನ್‌  ಪಿಂಟೋ ಇವರು ಶ್ರೀ ಐವನ್‌ ಡಿಸೋಜಾರವರ ನೇತೃತ್ವದಲ್ಲಿ ಕೇವಲ 45 ದಿನಗಳ ಅವಧಿಯಲ್ಲಿ ಸಾರ್ವಜನಿಕರಿಗೆ ಬಹಳ ಪ್ರಮುಖವಾದ 4 ರಸ್ತೆಗಳನ್ನು ಮಾಡುವ ಮೂಲಕ ಈ ಭಾಗದ ಜನರ ಬೇಡಿಕೆಯನ್ನು ಈಡೇರಿಸಿದ್ದಾರೆ. ಸಾರ್ವಜನಿಕರು ಈ ಯೋಜನೆಗಳನ್ನು ಸದುಪಯೋಗಪಡಿಸುವ ಜೊತೆಗೆ ಉತ್ತಮ ಕೆಲಸಗಳನ್ನು ನೀಡುವ ಅವಶ್ಯಕತೆ  ಎಂದು ಪೆರ್ಮನ್ನೂರು ಚರ್ಚಿನ ಧರ್ಮಗುರುಗಳು ಮಾತನಾಡುತ್ತಾ ತಿಳಿಸಿದರು

ಈ ಸಮಾರಂಭದಲ್ಲಿ ಎಂ.ಎಲ್.ಸಿ ಮಂಜುನಾಥ ಭಂಡಾರಿ ಮಾತನಾಡಿ ಸರಕಾರದ ಕೆಲಸವನ್ನು ತಮ್ಮ ಕೆಲಸವೆಂದು ಭಾವಿಸಿ ಉತ್ತಮ ರಸ್ತೆ ನಿರ್ಮಣ ಮಾಡುವ ಮೂಲಕ ಜನರ ಆಗು-ಹೋಗುಗಳಿಗೆ ಸ್ಪಂದಿಸುವಂತಹ ವಿಧಾನ ಪರಿಷತ್‌ ಶಾಸಕರಾದ ಶ್ರೀ ಐವನ್‌ ಡಿʼಸೋಜಾರವರ ನೇರೃತ್ವದಲ್ಲಿ ಕೆಲಸ ಮಾಡುವಾಗ ನಾನು ಅವರಿಗೆ ಧ್ವನಿಗೂಡಿಸುವುದಾಗಿ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ತಿಳಿಸಿದರು.

ವಿಧಾನ ಪರಿಷತ್ ಶಾಸಕರಾದ ಮಂಜುನಾಥ್ ಭಂಡಾರಿ, permannur ಚರ್ಚ್ ನ ಧರ್ಮ ಗುರು ಫಾದರ್ ಸಿಪ್ರಿಯನ್ , ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸಲೀಂ, ಮಾಜಿ ಕಾರ್ಪೋರೇಟರ್ ನವೀನ್ ಡಿಸೋಜಾ, ನಾಗೇಂದ್ರ ಕುಮಾರ್ ಜೆಪ್ಪಿನಮೊಗರು, ಅಪ್ಪಿಲತ, ಸಬಿತ ಮಿಸ್ಕಿತ್, ಸತೀಶ್ ಪೆಂಗಲ್, ಪ್ರೇಮ್ ಬಲ್ಲಾಲ್ಬಾಗ್, ಬಾಸ್ಕರ್ ರಾವ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸಲೀಂ ನಾಯಕರುಗಳಾದ ಸುಧಾಕರ್ ಜೆಪ್ಪಿನಮೊಗರು, ಪಿಯುಸ್ ಮೊಂತೆರೋ, ಮನೀಶ್ ಬೋಳಾರ್, ಮನುರಾಜ್, ದಿನೇಶ್ ಮೂಲೂರ್ ಚಂದ್ರಹಾಸ್ ಪೂಜಾರಿ ಕೋಡಿಕಲ್, ಇಮ್ರಾನ್ ಏ.ಆರ್, ಪ್ರವೀಣ್ ಜೇಮ್ಸ್, ಕ್ಲೇವ್ ವೆಲೆನ್ಸಿಯಾ, ಅನಿಲ್ ರಸ್ಕಿನ, ಜೋಕಿಮ್ ಡಿಸೋಜಾ, ವಿಲ್ಫ್ರೆಡ್ ಮಿನೇಜಸ್, ವಿಕ್ಟೋರಿಯಾ ಅತ್ತಾವರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here