ಮೂಡುಬಿದಿರೆ ಬಿ.ಆರ್.ಪಿ. ಪ್ರೌಢಶಾಲೆಯಲ್ಲಿ ಎಂಸಿಎಫ್ ಪ್ರಾಯೋಜಿತ ಸುಸಜ್ಜಿತ ಶೌಚಾಲಯ ಉದ್ಘಾಟನೆ

0
161

ಮೂಡುಬಿದಿರೆ: ಎಡ್ವೆನ್ಸ್ ಕಂಪೆನಿಯವರು ನಡೆಸುತ್ತಿರುವ ಎಂ ಸಿ ಎಫ್ ನ ಸಿಎಸ್ಆರ್ ಫಂಡ್ ನಿಂದ ನಿರ್ಮಿಸಿದ ಹೆಣ್ಣು ಮಕ್ಕಳ ಸುಸಜ್ಜಿತ ಶೌಚಾಲಯವನ್ನು ಜೂನ್ 26 ರಂದು ಉದ್ಘಾಟಿಸಲಾಯಿತು.

ಎಂ ಸಿ ಎಫ್ ನ ಪ್ರಾಜೆಕ್ಟ್ ಜಿ.ಎಂ. ರಾಘವೇಂದ್ರ ಅವರು ಉದ್ಘಾಟಿಸಿ ಮಾತನಾಡಿದರು. ಇಲ್ಲಿಯ ಮುಖಂಡರು, ಮುತುವರ್ಜಿಯಿಂದ ಎಲ್ಲಾ ಕಾರ್ಯಕ್ಕೂ ಸಹಕರಿಸುತ್ತಿರುವದು ಸಂತಸ ತಂದಿದೆ. ವಿದ್ಯಾರ್ಥಿಗಳಿಗೆ, ಶಾಲೆಗಳಿಗೆ ಸಾಕಷ್ಟು ಸಹಾಯ ಮಾಡುತ್ತೇವೆ ಎಂದು ತಿಳಿಸಿದರು. ಎಂ ಸಿ ಎಫ್ ನ ಸಹಕಾರ ಅಭಿನಂದನೀಯ, ಹಿಂದುಳಿದ ವರ್ಗದ ಮಕ್ಕಳನ್ನು ಕಳುಹಿಸಿ, ಕನ್ನಡ ಮಾಧ್ಯಮದ ಉಳಿವಿಗೆ ಸಹಕರಿಸುತ್ತಿರುವ ಹೆತ್ತವರಿಗೆ ಧನ್ಯವಾದಗಳು, ಮಕ್ಕಳು ಉತ್ತಮವಾಗಿ ಡಿಸ್ಟಿಂಕ್ಷನ್ ನಲ್ಲಿ ಕಲಿಯ ಬೇಕು, ನಾವು ‌ಸೌಲಭ್ಯ ಒದಗಿಸುತ್ತೇವೆ ಎಂದು ಮಾಜಿ ಸಚಿವ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಅಭಯ ಚಂದ್ರ ಜೈನ್ ಭರವಸೆ ಇತ್ತರು. ವೇದಿಕೆಯಲ್ಲಿ ಎಂ ಸಿ ಎಫ್ ನ ಡಾ.ಯೋಗೀಶ್, ಅಶೋಕ್ ಪ್ರಭು, ವಿವೇಕ್ ಕೋಟ್ಯಾನ್, ಧರ್ಮವೀರ, ಮುಖಂಡರುಗಳಾದ ಸುರೇಶ್ ಪ್ರಭು, ಅಬು ಲಾಲ್, ಮುಖ್ಯ ಶಿಕ್ಷಕಿ ತೆರೆಸಾ ಹಾಜರಿದ್ದರು.
ಬಿ ಆರ್ ಪಿ ಟ್ರಸ್ಟ್ ಸಂಚಾಲಕ ರಾಮನಾಥ ಭಟ್ ಸ್ವಾಗತಿಸಿದರು. ಶಿಕ್ಷಕ ಕಿರಣ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ವರದಿ: ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here