ಮೂಡುಬಿದಿರೆ ಬಿ.ಆರ್.ಪಿ: ಉಚಿತ ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಣೆ

0
165

ಮೂಡುಬಿದಿರೆಯ ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯಲ್ಲಿ ಜೂನ್ 28 ರಂದು ಉಚಿತ ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಣೆ ನಡೆಯಿತು. ಹಳೆ ವಿದ್ಯಾರ್ಥಿ ಧೀರಜ್ ಶೆಣೈ ಹಾಗೂ ಬಳಗದವರು ಪ್ರತೀ ವರ್ಷದಂತೆ ಈ ವರ್ಷವೂ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಮೊಬಲಗಿನ ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಿಸಿದರು. ಶಾಲಾ ಸಂಚಾಲಕ ರಾಮನಾಥ ಭಟ್ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿಯ ಸತೀಶ್ ಕಾಮತ್, ಮುಖ್ಯ ಶಿಕ್ಷಕಿ ತೆರೆಸಾ ಕರ್ಡೋಸಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೃತಿಕಾ ಸ್ವಾಗತಿಸಿದರು. ಕಾವ್ಯ , ಸುಮಂತ್ ಸಂಘಟಿಸಿದರು. ಕಿರಣ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here