ಹಣ್ಣಿನ ಬೆಳೆಯಲ್ಲಿ ಸುಧಾರಣೆ ಮಾಹಿತಿ

0
130

ಮೂಡುಬಿದಿರೆ ಕೃಷಿ ವಿಚಾರ ವಿನಿಮಯ ಕೇಂದ್ರ, ಸಮಾಜ ಮಂದಿರ ಹಾಗೂ ರೈತಜನ್ಯ ಕಂಪೆನಿಗಳ ಜಂಟಿ ಆಶ್ರಯದಲ್ಲಿ ಹಣ್ಣಿನ ಬೆಳೆಯಲ್ಲಿ ಸುಧಾರಣೆ ಕಾರ್ಯಕ್ರಮ ಜೂನ್ 28 ರಂದು ಸಮಾಜ ಮಂದಿರದಲ್ಲಿ ನಡೆಯಿತು. ಬಂಟ್ವಾಳ ಎಸ್ ವಿ.ಎಸ್. ಕಾಲೇಜಿನ ಪ್ರೊಫೆಸರ್ ಡಾ.ವಿನಾಯಕ ಕೆ.ಎಸ್. ಸಂಪನ್ಮೂಲ ವ್ಯಕ್ತಿಯಾಗಿದ್ದರು. ಅವರು ತಮ್ಮ ಭಾಷಣದಲ್ಲಿ ಹಣ್ಣುಗಳನ್ನು ಬಹಳ ಜತನದಿಂದ ಕಾಪಾಡಿ. ಹುಳು ಹುಪ್ಪಟೆಗಳಿಂದ ರಕ್ಷಿಸಲು ಹಲವಾರು ವಿಧಾನಗಳನ್ನು ಅನುಸರಿಸಿ. ಇಲ್ಲದಿದ್ದರೆ ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಎಂಬಂತೆ ಆಗುತ್ತದೆ ಎಂದು ಹಲವಾರು ಸುಧಾರಿತ ಕ್ರಮಗಳನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ವರ್ಗಾವಣೆಗೊಳ್ಳುವ ತೋಟಗಾರಿಕಾ ಅಧಿಕಾರಿ ಯುಗೇಂದ್ರ ರನ್ನು ಸಮ್ಮಾನಿಸಲಾಯಿತು.. ಎಂ ಸಿ ಎಸ್ ಬ್ಯಾಂಕಿನ ಅಧ್ಯಕ್ಷ ಬಾಹುಬಲಿ ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ ಹವಾಮಾನ ನಂಬಿದ ರೈತರ ಪರಿಸ್ಥಿತಿ ವಿವರಿಸಿದರು.
ವೇದಿಕೆಯಲ್ಲಿ ರೈತಜನ್ಯದ ಲಿಯೋ ವಾಲ್ಟರ್ ನಜ್ರೆತ್, ಕೃಷಿ ಕೇಂದ್ರದ ಅಭಯ್ ಕುಮಾರ್ ಹಾಜರಿದ್ದರು. ರಾಜವರ್ಮ ಸ್ವಾಗತಿಸಿದರು. ಸದಾನಂದ ಕಾರ್ಯಕ್ರಮ ನಿರ್ವಹಿಸಿದರು. ಸಂದೀಪ್ ಪೂಜಾರಿ ವಂದಿಸಿದರು.

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here