ಸಪಲಿಗರ ಯಾನೆ ಗಾಣಿಗರ ಸೇವಾ ಸಂಘ (ರಿ) ಮೂಡುಬಿದರೆ ಇದರ ವತಿಯಿಂದ ನಡೆದ ಛತ್ರಪತಿ ಶಿವಾಜಿ ನಾಟಕ ಪ್ರದರ್ಶನವನ್ನು ಎಕ್ಸಲೆ೦ಟ್ ಕಾಲೇಜಿನ ಅಧ್ಯಕ್ಷರಾದ ಯುವರಾಜ್ ಜೈನ್ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಈ ಸಂದರ್ಭ ವಿಜಯಕುಮಾರ್ ಕೊಡಿಯಾಲ್ ಬೈಲ್ ಹಾಗೂ ಗಾಣಿಗ ಸಮಾಜದ ಕಲಾವಿದರಾದ ದಾಮೋದರ ಸಪಲಿಗ, ಸುಕೇಶ್ ವೇಣೂರು, ಪ್ರೇಮ್ ರಾಜ್ ಕೊಯಿಲ, ಸೂರಜ್ ಸಾಲಿಯಾನ್ ಅರ್ಕುಳ, ಜೀತೇಶ್ ಕುಮಾರ್ ಉಳಿಯ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಅಲ೦ಗಾರು ದೇವಸ್ಥಾನದ ಸುಬ್ರಹ್ಮಣ್ಯ ಭಟ್, ದಿನೇಶ್ ಚೌಟ, ಅ೦ಡಾರು ಗುಣಾಪಾಲ ಹೆಗ್ಡೆ, ತಿಲಕ ಜೈನ್ , ರವೀಂದ್ರ ಕೈಕ೦ಬ, ಪ್ರತಾಪ್ ಬೆಟ್ಕೇರಿ, ಶತ್ರುಘ್ಞ ಅಲ೦ಗಾರು, ಸುಜಯ ಬ೦ಗೇರ ಉಪಸ್ಥಿತರಿದ್ದರು. ಸ೦ಘದ ಅಧ್ಯಕ್ಷ ರಾಜೇಶ್ ಬ೦ಗೇರ ಸ್ವಾಗತಿಸಿದರು. ಜಗನ್ನಾಥ ಸಪಲಿಗ ಕಾರ್ಯಕ್ರಮ ನಿರೂಪಿಸಿದರು.