ಶಿಮಂತೂರು: ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ಶಿಮಂತೂರಿನಲ್ಲಿ ನಡೆದ ಶಿಕ್ಷಕರ-ರಕ್ಷಕರ ಸಂಘದ (PTA) ಸಭೆಯಲ್ಲಿ ಶೈಕ್ಷಣಿಕ ವರ್ಷ 2025-26ನೇ ಸಾಲಿನ ಹೊಸ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಪ್ರಾಂಶುಪಾಲರಾದ ಜಿತೇಂದ್ರ ವಿ. ರಾವ್ ಅವರು ವಹಿಸಿದ್ದರು.
ಸಭೆಯಲ್ಲಿ ಸುಮನಾ ಅವರನ್ನು ಸಂಘದ ಅಧ್ಯಕ್ಷರಾಗಿ ರೂಪಾಕ್ಷಿ ಶೆಟ್ಟಿಗಾರ್ ಅವರನ್ನು ಉಪಾಧ್ಯಕ್ಷರಾಗಿ, ಪೂರ್ಣಿಮಾ ಅವರನ್ನು ಸಹ ಕಾರ್ಯದರ್ಶಿಯಾಗಿ ಹಾಗೂ ಸಹ ಶಿಕ್ಷಕಿ ದೀಪಿಕಾ ಅವರನ್ನು ಕೋಶಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಪ್ರಾಂಶುಪಾಲರಾದ ಜಿತೇಂದ್ರ ವಿ. ರಾವ್ ಅವರು ಮುಂದುವರೆಯಲಿದ್ದಾರೆ.
ಹೊಸ ಪದಾಧಿಕಾರಿಗಳ ನೇಮಕದೊಂದಿಗೆ ಸಂಘವು ಶಾಲಾ ಮಕ್ಕಳ ಒಳ್ಳೆಯದಕ್ಕಾಗಿ ಹೆಚ್ಚು ಶ್ರಮಿಸಿ ಕಾರ್ಯನಿರ್ವಹಿಸಲಿದೆ ಎಂಬ ನಂಬಿಕೆ ವ್ಯಕ್ತವಾಯಿತು. ಸಭೆಯಲ್ಲಿ ಹಲವಾರು ಸದಸ್ಯರು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.