ಬ್ಯಾಂಕ್ ಆಫ್ ಬಡೋಡಾ – ಉಳಿತಾಯ ಖಾತೆಗಳಲ್ಲಿ ಕನಿಷ್ಠ ಶೇಷವನ್ನು ಕಾಯ್ದಿರಿಸದಿದಕ್ಕಾಗಿ ವಿಧಿಸುವ ಶುಲ್ಕ ರದ್ದು

0
107

ಮುಂಬೈ,: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (ಬ್ಯಾಂಕ್) ತನ್ನ ಗ್ರಾಹಕರ ಪರವಾಗಿ ಮಹತ್ವಪೂರ್ಣ ಮತ್ತು ಗ್ರಾಹಕ ಸ್ನೇಹಿ ಕ್ರಮವಾಗಿ, 2025ರ ಜುಲೈ 1ರಿಂದ ಎಲ್ಲ ಸಾಮಾನು ಉಳಿತಾಯ ಖಾತೆಗಳಲ್ಲಿ ಕನಿಷ್ಠ ಶೇಷ ಕಾಯ್ದಿರಿಸದಿದಕ್ಕಾಗಿ ವಿಧಿಸಲಾಗುತ್ತಿದ್ದ ಶುಲ್ಕಗಳನ್ನು ರದ್ದು ಪಡಿಸಿದೆ. ಈ ಮೂಲಕ ಗ್ರಾಹಕರು ತಮ್ಮ ಉಳಿತಾಯ ಖಾತೆಯಲ್ಲಿ ಮಾಸಿಕ ಸರಾಸರಿ ಶೇಷವು ಕಡಿಮೆಯಾಗಿದ್ದರೂ ಯಾವುದೇ ಶುಲ್ಕವಿಲ್ಲದೆ ಬ್ಯಾಂಕಿಂಗ್ ಸೇವೆ ಪಡೆಯಬಹುದಾಗಿದೆ. ಈ ರದ್ದು ಪಡೆಯು ಪ್ರೀಮಿಯಂ ಉಳಿತಾಯ ಖಾತೆ ಯೋಜನೆಗಳಿಗೆ ಅನ್ವಯಿಸದು.

ಬ್ಯಾಂಕ್ ಆಫ್ ಬಡೋದಾದ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರೀಮತಿ ಬೀನಾ ವಹೀದ್ ಅವರು ಹೇಳಿದ್ದಾರೆ: “ಕನಿಷ್ಠ ಶೇಷ ಶುಲ್ಕಗಳನ್ನು ತೆಗೆದುಹಾಕುವ ಈ ನಿರ್ಧಾರ, ನಮ್ಮ ಗ್ರಾಹಕರಿಗೆ ನಮ್ಮ ನಿರಂತರ ಬದ್ಧತೆಯ ಪ್ರತೀಕವಾಗಿದೆ ಮತ್ತು ಬ್ಯಾಂಕಿಂಗ್ ಸೇವೆಗಳನ್ನು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆ. ಇದರಿಂದ ಗ್ರಾಹಕರಿಗೆ ಒಳಗೊಂಡ ಸಮಗ್ರ ಮತ್ತು ಮೌಲ್ಯಾಧಾರಿತ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ನಮ್ಮ, ಪ್ರಯತ್ನಗಳು ಇನ್ನಷ್ಟು ಬಲಗೊಳ್ಳುತ್ತವೆ.

LEAVE A REPLY

Please enter your comment!
Please enter your name here