ಜು. 27: ಪಚ್ಚನಾಡಿ ಶ್ರೀಮಂತ ರಾಜಗುಳಿಗ ಕ್ಷೇತ್ರದ ಪ್ರಾಂಗಣದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ

0
190

ಮಂಗಳೂರು: ಶ್ರೀಮಂತ ರಾಜಗುಳಿಗ ಕ್ಷೇತ್ರ ಪಚ್ಚನಾಡಿಯ ಮೂಡುಮನೆಗುತ್ತು ಬಂದಲೆ ಇದರ ವತಿಯಿಂದ ಆಟಿ ತಿಂಗಳ ಪ್ರಾಚೀನ ತಿಂಡಿ ತಿನಿಸುಗಳ ಆಚಾರ-ವಿಚಾರಗಳ ವೈಶಿಷ್ಟತೆ ನೆನಪಿಸುವ ಆಟಿಡೊಂಜಿ ದಿನ ಕಾರ್ಯಕ್ರಮವು ಜು. 27ರಂದು ಬೆಳಿಗ್ಗೆ 8-30ರಿಂದ ಕ್ಷೇತ್ರದ ಪ್ರಾಂಗಣದಲ್ಲಿ ನಡೆಯಲಿದೆ.

ಬೆಳಿಗ್ಗೆ ೯-೩೦ಕ್ಕೆ ಸಭಾ ಕಾರ್ಯಕ್ರಮ ಜರಗಲಿದ್ದು, ಶಾಸಕ ಡಾ. ವೈ. ಭರತ್‌ ಶೆಟ್ಟಿ, ಮಾಜಿ ಮೇಯರ್‌ ಜಯಾನಂದ ಅಂಚನ್‌ ಬಿಜೆಪಿ ಅಧ್ಯಕ್ಷ ರಾಜೇಶ್‌ ಕೊಟ್ಟಾರಿ ಸೇರಿದಂತೆ ಹಲವು ಅತಿಥಿ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಸಹಾಯಧನ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಮಧ್ಯಾಹ್ನ ಗಂಟೆ ೨ರಿಂದ ಪುಷ್ಪರಾಜ್‌ ಬೊಳ್ಳಾರ್‌ ಸಾರಥ್ಯದ ಕುಡ್ಲ ಕುಸಾಲ್‌ ತಂಡದಿಂದ ತೆಲಿಕೆದ ಕಮ್ಮೆನ ಹಾಸ್ಯ ಪ್ರಹಸನ ಜರಗಲಿದೆ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here