ಸ್ನಾನಗೃಹ ಕುಸಿದು ಬಿದ್ದು ಮಹಿಳೆಯ ಕಾಲಿನ ಮೂಳೆ ಮುರಿತ

0
163

ಮೂಡುಬಿದಿರೆ : ಗುರುವಾರ ಬೀಸಿದ ಗಾಳಿ ಮಳೆಗೆ ಮನೆಯ ಸ್ನಾನ ಗೃಹ ಕುಸಿದು ಬಿದ್ದ ಪರಿಣಾಮವಾಗಿ ಮಹಿಳೆಯೋವ೯ರು ಕಾಲಿನ ಮೂಳೆ ಮುರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಮೂಡುಮಾನಾ೯ಡು ಗ್ರಾ. ಪಂ. ವ್ಯಾಪ್ತಿಯ ಮೂಡುನಾ೯ಡಿನಲ್ಲಿ ನಡೆದಿದೆ.

ಮೂಡುಮಾನಾ೯ಡಿನ ನಾಯ್ಲ ಹೊಸಮನೆಯ ರತ್ನಾಕರ ಪೂಜಾರಿ ಅವರ ಮನೆಯ ಸ್ನಾನ ಗೃಹ ಮತ್ತು ಶೌಚಾಲಯ ನಿನ್ನೆ ಮಧ್ಯಾಹ್ನ ಕುಸಿದು ಬಿದ್ದಿದ್ದು ಈ ಸಂದಭ೯ ರತ್ನಾಕರ ಅವರ ಪತ್ನಿ ನೀರು ಕಾಯಿಸುತ್ತಿದ್ದರು. ಜೋರಾಗಿ ಬೀಸಿದ ಗಾಳಿ ಮಳೆಗೆ ಸ್ನಾನ ಗೃಹದ ಶೀಟ್ ಕಾಲಿಗೆ ಬಿದ್ದಿದೆ ಇದರ ಪರಿಣಾಮವಾಗಿ ಕಾಲಿನ ಮೂಳೆ ಮುರಿತಕ್ಕೊಳಗಾಗಿದೆ. ಸಾವಿರಾರು ರೂ. ನಷ್ಟ ಸಂಭವಿಸಿದೆ.

LEAVE A REPLY

Please enter your comment!
Please enter your name here