ಹೆಬ್ರಿ: ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜು ಹೆಬ್ರಿ ಇಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಯಿತು.
ಕಾರ್ಗಿಲ್ ಯುದ್ಧದಲ್ಲಿ ಹೋರಾಟ ಮಾಡಿದ ಹಾಗೂ ಯುದ್ಧದಲ್ಲಿ ಮಡಿದ ವೀರಯೋಧರ ಭಾವಚಿತ್ರಕ್ಕೆ ದೀಪ ಬೆಳಗಿ , ಪುಷ್ಪ ನಮನ ಸಲ್ಲಿಸಲಾಯಿತು. ಸುಮಾರು 18 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವ್ರತ್ತರಾದ ಶಂಕರ ಶೆಟ್ಟಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಧಾನ ಭಾಷಣಕಾರರಾಗಿ ಆಗಮಿಸಿದ ಖ್ಯಾತ ವಾಗ್ಮಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಇವರು ಮಾತನಾಡಿ , ಶಾಂತಿ ಪ್ರಿಯ ಭಾರತ ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗ ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧವನ್ನು ಹೊಂದಬೇಕು ಎನ್ನುವ ಉದ್ದೇಶದಿಂದ ಲಾಹೋರ್ ಒಪ್ಪಂದಕ್ಕೆ ಸಹಿ ಹಾಕುತ್ತಾರೆ . ಇದರ ಭಾಗವಾಗಿ ಸಂಜೋತ್ ಎಕ್ಸಪ್ರೆಸ್ ರೈಲು, ಬಸ್ಸಿನ ಓಡಾಟ ಆರಂಭವಾಗುತ್ತದೆ. ಗಡಿ ಭಾಗದಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ . ಇದರಿಂದ ಜನ ಜೀವನ ಸಹಜ ಸ್ಥಿತಿಯತ್ತ ಮರಳಿತು. ಆದರೆ ಕುತಂತ್ರಿ ಪಾಕ್ ನ ಸೈನಿಕರು ಮೇ ತಿಂಗಳ ಚಳಿಗಾಲದ ಸಂದರ್ಭದಲ್ಲಿ ಸಿಯಾಚಿನ್ ಗುಡ್ಡ ಪ್ರದೇಶದ ಮೇಲೆ ಬಂದು ಬೀಡು ಬಿಡುತ್ತಾರೆ . ಇದನ್ನು ಅರಿತು ಆ ಭಾಗಕ್ಕೆ ತೆರಳಿದ ನಮ್ಮ ಸೈನಿಕರನ್ನು ಬರ್ಬರವಾಗಿ ಸಾಯಿಸುತ್ತಾರೆ . ಲೇಹ್ ಮತ್ತು ಲಡಾಕ್ ಸಂಪರ್ಕ ಮಾರ್ಗವನ್ನು ಬಂದ್ ಮಾಡುವ ಪ್ರಯತ್ನವನ್ನು ಮಾಡುತ್ತಾರೆ. ಇದರಿಂದ ಆಪರೇಷನ್ ವಿಜಯ್ ಹೆಸರಿನಲ್ಲಿ ಆರಂಭಗೊಂಡ ಯುದ್ಧ ಜುಲೈ 26ರ ವರೆಗೆ ನಡೆದು ಕೊನೆಗೆ ನಮಗೆ ಜಯ ಲಭಿಸುತ್ತದೆ . ಇದರಲ್ಲಿ ಸಾಕಷ್ಟು ಅಧಿಕಾರಿಗಳು , ಯುವ ಸೈನಿಕರು ಹುತಾತ್ಮರಾಗುತ್ತಾರೆ . ಆ ವಿಜಯದ ನೆನಪಿನಲ್ಲಿ ಇಂದು ಕಾರ್ಯಕ್ರಮವನ್ನು ಆಚರಿಸುತ್ತಿರುವ ನಾವು ನಮ್ಮಲ್ಲಿ ದೇಶಭಕ್ತಿಯ ಕಿಚ್ಚನ್ನು ಹಚ್ಚಿಸಿಕೊಳ್ಳಬೇಕು ಎಂದರು.
ಸನ್ಮಾನವನ್ನ ಸ್ವೀಕರಿಸಿದ ನಿವೃತ್ತ ಸೈನಿಕರಾದ ಶಂಕರ್ ಶೆಟ್ಟಿ ಅವರು ಮಾತನಾಡಿ, ಕಾರ್ಗಿಲ್ ಭಾಗದಲ್ಲಿ ಕೂಡ ನಾವು ಕರ್ತವ್ಯವನ್ನು ನಿರ್ವಹಿಸಿದ್ದೇವೆ ಅಲ್ಲಿ ಕರ್ತವ್ಯವನ್ನು ನಿರ್ವಹಿಸುವುದು ಅತ್ಯಂತ ಕಠಿಣ ಕಾರ್ಯ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ರಾಜೇಶ್ ನಾಯಕ್, ಟ್ರಸ್ಟಿಗಳಾದ ಬಾಲಕೃಷ್ಣ ಮಲ್ಯ , ವಿಷ್ಣುಮೂರ್ತಿ ನಾಯಕ್, ಹಾಸ್ಟೆಲ್ ಕಮಿಟಿ ಸದಸ್ಯರಾದ ರಾಮಕೃಷ್ಣ ಆಚಾರ್ಯ, ಪ್ರಾಂಶುಪಾಲರಾದ ಪ್ರಕಾಶ್ ಜೋಗಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರಚಿತಾ ಕುಲಾಲ್ ಕಾರ್ಯಕ್ರಮವನ್ನ ನಿರೂಪಿಸಿ , ವಂದಿಸಿದಳು. ಬೋಧಕ ಬೋಧಕೇತರ ವೃಂದ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.