ಗೂಗಲ್​ ಮ್ಯಾಪ್​ ನಂಬಿಕೊಂಡು ಹೋಗಿ ಎಡವಟ್ಟು; ಕಂದಕಕ್ಕೆ ಬಿದ್ದ ಕಾರು!

0
106

ಟೆಕ್ನಾಲಜಿ ಮುಂದುವರೆಯುತ್ತಿರುವಂತೆ ಜನರು ಕೂಡ ಟೆಕ್ನಾಲಜಿಗೆ ಹೊಂದಿಕೊಂಡಿದ್ದಾರೆ. ಗೂಗಲ್​, ಎಐ (AI) ಬಂದಾಗಿನಿಂದ ಅದೆಷ್ಟೋ ಕೆಲಸಗಳು ಸಲೀಸಾಗಿ ನಡೆಯುತ್ತಿವೆ. ಅದೇ ರೀತಿ ಕೆಲವರಿಗೆ ಕೆಲ ಅನಾನುಕೂಲ ಕೂಡ ಆಗಿದೆ. ಅದೇ ರೀತಿ ಇಲ್ಲೊಬ್ಬ ಮಹಿಳೆ ಗೂಗಲ್​ ಮ್ಯಾಪ್ ಹಾಕಿಕೊಂಡು ತಾವು ಹೋಗಬೇಕಾದ ಸ್ಥಳಕ್ಕೆ ಪ್ರಯಾಣ ಮಾಡುತ್ತಿದ್ದರು. ಆದರೆ ಗೂಗಲ್​ ಮ್ಯಾಪ್​ ಮಾಡಿದ ಎಡವಟ್ಟಿಗೆ ಆ ಮಹಿಳೆ ಕಾರು ಸಮೇತ ಕಂದಕಕ್ಕೆ ಬಿದ್ದಿದ್ದಾರೆ.

ನವಿ ಮುಂಬೈನ ಬೇಲಾಪುರದಿಂದ ಉಲ್ವೆಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಗೂಗಲ್ ಮ್ಯಾಪ್‌ನ ತಪ್ಪು ಮಾರ್ಗದರ್ಶನದಿಂದಾಗಿ ತಮ್ಮ ಕಾರನ್ನು ಕಂದಕಕ್ಕೆ ಚಲಾಯಿಸಿದ ಘಟನೆ ಜುಲೈ 26, 2025ರಂದು ಮುಂಜಾನೆ 1 ಗಂಟೆ ಸುಮಾರಿಗೆ ಸಂಭವಿಸಿದೆ.

ಗೂಗಲ್​ ಮ್ಯಾಪ್​ ಎಡವಟ್ಟು; ಕಂದಕಕ್ಕೆ ಬಿದ್ದ ಕಾರು!

ಗೂಗಲ್​ ಮ್ಯಾಪ್​ ಕೆಲವುಮೊಮ್ಮೆ ಎಡವಟ್ಟು ಮಾಡಿ ತಪ್ಪು ಮಾರ್ಗದರ್ಶನ ನೀಡುತ್ತೆ ಎಂಬುದಕ್ಕೆ ಈ ಘಟನೆಯೇ ಉದಾಹರಣೆ. ಮಹಿಳೆ ನವಿ ಮುಂಬೈನ ಬೇಲಾಪುರದಿಂದ ಉಲ್ವೆಗೆ ಪ್ರಯಾಣಿಸುತ್ತಿದ್ದು, ತಪ್ಪು ಮಾರ್ಗದರ್ಶನದಿಂದ ಕಂದಕಕ್ಕೆ ಕಾರನ್ನು ಚಲಾಯಿಸಿದ್ದಾರೆ. ಸದ್ಯ ಅದೃಷ್ಟವಶಾತ್​ ಈ ಘಟನೆಯಲ್ಲಿ ಮಹಿಳೆ ಗಾಯಗೊಳ್ಳದೆ ಪಾರಾಗಿದ್ದು, ಸಾಗರ ಭದ್ರತಾ ಪಡೆಯ (ಮರೈನ್ ಸೆಕ್ಯುರಿಟಿ ಫೋರ್ಸ್) ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ರಕ್ಷಿಸಲ್ಪಟ್ಟಿದ್ದಾಳೆ.

ಸ್ಥಳೀಯರಿಂದ ಮಹಿಳೆ ರಕ್ಷಣೆ!

ಕಾರನ್ನು ಕಂದಕದಿಂದ ಕ್ರೇನ್ ಮೂಲಕ ಹೊರತೆಗೆಯಲಾಯಿತು. ಈ ಘಟನೆಯು ಭಾರತದಲ್ಲಿ ಗೂಗಲ್ ಮ್ಯಾಪ್‌ನಂತಹ ನ್ಯಾವಿಗೇಷನ್ ಆಪ್‌ಗಳ ದೋಷಯುಕ್ತ ಮಾರ್ಗದರ್ಶನದಿಂದ ಉಂಟಾಗುವ ಅಪಾಯಗಳನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.ಮಹಿಳೆಯು ಬೇಲಾಪುರದ ಬೇ ಸೇತುವೆಯ ಮೂಲಕ ಉಲ್ವೆಗೆ ತೆರಳಬೇಕಿತ್ತು, ಆದರೆ ಗೂಗಲ್ ಮ್ಯಾಪ್ ಧ್ರುವತಾರ ಜೆಟ್ಟಿಗೆ ಹೋಗುವ ಸೇತುವೆಯ ಕೆಳಗಿನ ಮಾರ್ಗವನ್ನು ಸೂಚಿಸಿತು. ಈ ತಪ್ಪು ಮಾರ್ಗದರ್ಶನವನ್ನು ನಂಬಿದ ಮಹಿಳೆ, ಕಾರನ್ನು ಚಲಾಯಿಸುತ್ತಾ ಸಾಗಿದ್ದಾಳೆ, ಆದರೆ ಕೆಲವೇ ನಿಮಿಷಗಳಲ್ಲಿ ಕಾರು ಕಂದಕದ ನೀರಿಗೆ ಜಾರಿದೆ.

LEAVE A REPLY

Please enter your comment!
Please enter your name here