ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಅಭೂತಪೂರ್ವ ಸೇವೆಗೈಯುತ್ತಿರುವ ಶ್ರೀ ಕಮಲಾಕ್ಷ ಕಾಮತ್ ಲೆಕ್ಕಪರಿಶೋಧಕರು ಕಾರ್ಕಳ ಇವರು ಪತ್ನಿ ಮೀರಾ .ಕೆ.ಕಾಮತ್ ಇವರ ಸ್ಮರಣಾರ್ಥ ಶಾಲೆಗೆ ಕಂಪ್ಯೂಟರ್ ಟೇಬಲ್ ಸಹಿತ ಐದು ಕಂಪ್ಯೂಟರ್ ಗಳ ಕೊಡುಗೆ ನೀಡಿದ್ದಾರೆ. ಇದರ ಕಂಪ್ಯೂಟರ್ ಕಲಿಕಾ ತರಗತಿ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 25-07-2025 ರಂದು ನಡೆಯಿತು ಕಂಪ್ಯೂಟರ್ ಕಲಿಕಾ ತರಗತಿ ಉದ್ಘಾಟಿಸಿ ಶಾಲಾ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಲೆಕ್ಕಪರಿಶೋಧಕರಾದ ಶ್ರೀ ಕಮಲಾಕ್ಷ ಕಾಮತ್ ರವರು ನಮ್ಮ ವ್ಯಕ್ತಿತ್ವ ನಮ್ಮ ಕೈಯಲ್ಲಿದೆ, ಕಂಪ್ಯೂಟರ್ ಅನ್ನು ಉತ್ತಮ ರೀತಿಯಲ್ಲಿ ಬಳಸಬೇಕು, ತಂತ್ರಜ್ಞಾನದ ಜ್ಞಾನ ಹೊಂದಬೇಕು ಪ್ರತಿಭಾವಂತ ಮಕ್ಕಳಾಗಬೇಕು, ಉತ್ತಮ ವ್ಯಕ್ತಿತ್ವ ಅಳವಡಿಸಿಕೊಳ್ಳಬೇಕು ಎಂದರು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ ಕಾರ್ಕಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ಶ್ರೀಮತಿ ಎಸ್ ಗಿರಿಜಮ್ಮ ಇವರು ಮಾತನಾಡಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಬೇಕು. ಪೋಷಕರು ಶಾಲೆಗೆ ಭೇಟಿ ನೀಡಿ ಮಕ್ಕಳ ಕಲಿಕಾ ಮಟ್ಟ ತಿಳಿದುಕೊಳ್ಳಬೇಕು. ಮಕ್ಕಳು ಮುಂದೊಂದು ದಿನ ಕಮಲಾಕ್ಷ ಕಾಮತ್ ರವರಂತೆ ಜನಾನುರಾಗಿ ಬೆಳೆಯಬೇಕೆಂದು ತಿಳಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾದ ನಿವೃತ್ತ ಪ್ರಾಂಶುಪಾಲರು ಆದ ಶ್ರೀಯುತ ಶ್ರೀವರ್ಮ ಅಜ್ರಿ ಯವರು ಮಾತನಾಡಿ ಮಕ್ಕಳಲ್ಲಿ ನೈತಿಕತೆ ಬೆಳೆಯಬೇಕು, ಉತ್ತಮ ವ್ಯಕ್ತಿತ್ವ ನಿರ್ಮಾಣವಾಗಬೇಕು, ಕಂಪ್ಯೂಟರ್ ಗಳನ್ನು ಉತ್ತಮ ಉದ್ದೇಶಕ್ಕಾಗಿ ಬಳಸಿಕೊಳ್ಳಬೇಕು, ಶಾಲೆಯು ಇಂದು ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ತಿಳಿಸಿದರು. ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀಯುತ ಗೋಪಾಲ್ ಪೂಜಾರಿ ಅವರು ಮಾತನಾಡಿ ಕಂಪ್ಯೂಟರ್ ಕೊಡುಗೆಯ ಬಗ್ಗೆ ಸಂತಸ ವ್ಯಕ್ತಪಡಿಸಿ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ ಮುಡಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶ್ರುತಿ.ಡಿ.ಅತಿಕಾರಿ ಮಾತನಾಡಿ ಶಾಲೆಯ ಗುಣಮಟ್ಟ ಸುಧಾರಿಸುವ ಸಲುವಾಗಿ ಕಂಪ್ಯೂಟರ್ ಜ್ಞಾನ ಅಗತ್ಯ. ಅದಕ್ಕೆ ಈಗ ಅವಕಾಶ ದೊರಕಿದೆ. ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು . ಪ್ರಾಸ್ತಾವಿಕ ನುಡಿಗಳಲ್ಲಿ ಕಮಲಾಕ್ಷ ಕಾಮತ್ ಅವರ ಸಾಮಾಜಿಕ ಕಾರ್ಯಗಳ ಪರಿಚಯ ಅವರ ವ್ಯಕ್ತಿತ್ವ ಕಾಳಜಿಯ ಬಗ್ಗೆ ವಿಸ್ತಾರವಾಗಿ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಯುತ ಕೃಷ್ಣ ಮೊಯಿಲಿ ತಿಳಿಸಿದರು. ಪಂಚಾಯತ್ ಸದಸ್ಯರಾದ ಶಿವಪ್ರಸಾದ್, ಲಕ್ಷ್ಮಿ, CRP ಶ್ರೀ ಯೋಗೀಶ್ ಕಿಣಿ ,BIERT ಶ್ರೀಮತಿ ಜ್ಯೋತಿ ,ಎಸ್‌ಡಿಎಂಸಿ ಉಪಾಧ್ಯಕ್ಷೆ ಶ್ರೀಮತಿ ವಾಣಿ ಆಚಾರ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಂದ್ರ ಜೈನ್ ,ಕಾರ್ಯದರ್ಶಿ ಭಾಸ್ಕರ್ ನಾಯಕ್ , ರಾಜೇಂದ್ರ ಜೈನ್, ಚಂದ್ರರಾಜ ಅಜ್ರಿ, ದಿವಾಕರ್ ಉಪಸ್ಥಿತರಿದ್ದರು ಮುಖ್ಯೋಪಾಧ್ಯಾಯರಾದ ಶ್ರೀಮತಿ ಜಯಾಕೃಷ್ಣ ಮೊಯಿಲಿ ಸ್ವಾಗತಿಸಿದರು. ಸಹ ಶಿಕ್ಷಕಿ ವೀಣಾ ಸರಸ್ವತಿ ಧನ್ಯವಾದವಿತ್ತರು. ಶಿಕ್ಷಕಿ ಲತಾ ಕಾರ್ಯಕ್ರಮ ನಿರೂಪಿಸಿದರು.