ದಾವಣಗೆರೆ: ಬಸವ ಸಂಸ್ಕೃತಿ ಅಭಿಯಾನದಿಂದ ದಿನಾಂಕ ಆ. 30 ಬೆಳಿಗ್ಗೆ 10 ಗಂಟೆಗೆ ನಗರದ ಜಯದೇವ ವೃತ್ತದಲ್ಲಿ ಇರುವ ಶಿವಯೋಗಿ ಮಂದಿರದ ಒಳಾಂಗಣದಲ್ಲಿ ರಾಜ್ಯ ಮಟ್ಟದ ಉಚಿತ ಕವಿ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಸವ ಸಂಸ್ಕೃತಿ ಅಭಿಯಾನದ ಅಧ್ಯಕ್ಷರಾದ ಅಣಬೇರು ರಾಜಣ್ಣ ತಿಳಿಸಿದ್ದಾರೆ.
ಈ ಕವಿಗೋಷ್ಠಿಯಲ್ಲಿ ಶ್ರೀ ಬಸವಣ್ಣನವರ ಕುರಿತು ಕವನ ವಾಚನ ಮಾಡುವವರು ದಿನಾಂಕ 20 ರೊಳಗೆ ಕುಸುಮಾ ಲೋಕೇಶ್ ಇವರ ಸನೀಹವಾಣಿ 7022002518 ಹೆಸರು ನೊಂದಾಯಿಸಬೇಕಾಗಿದೆ ಎಂದು ಅಭಿಯಾನದ ಗೌರವ ಅಧ್ಯಕ್ಷರಾದ ಅಥಣಿ ವೀರಣ್ಣ ಪ್ರಕಟಿಸಿದ್ದಾರೆ.
ವಿರಕ್ತಮಠದ ಗುರುಗಳಾದ ಡಾ. ಶ್ರೀ ಬಸವಪ್ರಭು ಸ್ವಾಮೀಜಿಯವರ ಸಾನಿಧ್ಯದಲ್ಲಿ ನಡೆಯುವ ಈ ಕವಿಗೋಷ್ಠಿಯಲ್ಲಿ ಭಾಗವಹಿಸಿದವರಿಗೆ ಕನ್ನಡ ತಾಯಿ ಭುನವೇಶ್ವರಿಯ ಸ್ಮರಣಿಕೆ, ಅಭಿನಂದನಾ ಪತ್ರ ವಿತರಿಸಲಾಗುವುದು. ಕರ್ನಾಟಕ ಸಾಂಸ್ಕೃತಿಕ ನಾಯಕ ಶ್ರೀ ಬಸವಣ್ಣನವರ ಅಭಿಮಾನಿಗಳು ಈ ಮಹತ್ವಪೂರ್ಣ, ಅಪರೂಪದ ಕವಿಗೋಷ್ಠಿಯಲ್ಲಿ ಭಾಗವಹಿಸಬೇಕಾಗಿ ಕವಿಗೋಷ್ಠಿ ಮುಖ್ಯಸ್ಥರಾದ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ.