ಮೂಡಬಿದಿರೆ: ಶ್ರೀ ಗುರು ರಾಘವೇಂದ್ರ ಮಠ, ಬನ್ನಡ್ಕ ಅವರ ನೇತೃತ್ವದಲ್ಲಿ ಉದ್ಘಾಟನೆಗೊಂಡ ಶ್ರೀ ಗುರು ರಾಘವೇಂದ್ರ ಕುಣಿತ ಭಜನಾ ಮಂಡಳಿ ಬನ್ನಡ್ಕ ತಂಡದ ವತಿಯಿಂದ ಭಜನಾ ತಂಡದ ಮಕ್ಕಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಳಿನಾಕ್ಷಿ ಸಭಾಭವನದಲ್ಲಿ ನಡೆಯಿತು.
ಪ್ರಾರಂಭದಲ್ಲಿ 17 ಸದಸ್ಯರೊಂದಿಗೆ ಆರಂಭಗೊಂಡ ಈ ತಂಡ, ಇದೀಗ 52 ಸದಸ್ಯರನ್ನು ಒಗ್ಗೂಡಿಸಿಕೊಂಡು ಯಶಸ್ವಿಯಾಗಿ ಮುಂದುವರಿಯುತ್ತಿದೆ. ಅತಿಥಿ ಗಣ್ಯರು ಈ ಬೆಳವಣಿಗೆಗೆ ಶ್ಲಾಘನೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಯಾನಂದ್ ಪೈ ಅಧ್ಯಕ್ಷರು, ಬನ್ನಡ್ಕ ಶಾರದೋತ್ಸವ ಸಮಿತಿ. ಗೋವಿಂದ ಭಟ್ ಆಡಳಿತ ಮುಖ್ಯಸ್ಥರು, ಶ್ರೀ ಗುರು ರಾಘವೇಂದ್ರ ಮಠ. ವಿಜಯ್ ನೀರ್ಕೆರೆ, ಕುಣಿತ ಭಜನಾ ಗುರುಗಳು. ಸತೀಶ್ ಸಂಚಾಲಕರು, ಭಜನಾ ಮಂಡಳಿ. ಭವ್ಯ ಸತೀಶ್ ಕೋಟ್ಯಾನ್ ಅಧ್ಯಕ್ಷರು, ಮಹಿಳಾ ಮಂಡಳಿ. ಮಹಾಶೇಷ ಭಟ್ ಅರ್ಚಕರು, ರಾಘವೇಂದ್ರ ಮಠ ಉಪಸ್ಥಿತರಿದ್ದರು.
ಭಜನಾ ತಂಡದ ನಾಯಕಿ ಕೃಪಾ ಕಾರ್ಯಕ್ರಮವನ್ನು ಮುನ್ನಡೆಸಿದರು. ಸುದರ್ಶನ್ ಕಿಲ್ಲೂರು, ಪ್ರವೀಣ್ ಕೆಸರ್ ಗದ್ದೆ, ಭಜನಾ ತರಬೇತುದಾರರು ಹಾಗೂ ತಂಡದ ಸರ್ವ ಪೋಷಕ ವರ್ಗದ ಸದಸ್ಯರು ಉಪಸ್ಥಿತರಿದ್ದರು.

