ವಿಹಿಂಪ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್‌ ಕೃಷ್ಣಮಠಕ್ಕೆ ಭೇಟಿ

0
10

ಉಡುಪಿ: ವಿಶ್ವ ಹಿಂದು ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ , ಸುಪ್ರೀಂ ಕೋರ್ಟ್ ಹಿರಿಯ ವಕೀಲ ಅಲೋಕ್ ಕುಮಾರ್ ಶುಕ್ರವಾರ ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡರು.

ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಂಘಟನೆಯ ಪ್ರಮುಖರು ಕಾರ್ಯಕರ್ತರುಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ಉಡುಪಿ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಪರ್ಯಾಯ ಶೀರೂರು ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಅನುಗ್ರಹ ಮಂತ್ರಾಕ್ಷತೆ ನೀಡಿದರು. ಬಳಿಕ ಭೋಜನ ಪ್ರಸಾದ ಸ್ವೀಕರಿಸಿದರು.

ಬೆಳಗ್ಗೆ ಬಾರಕೂರಿನಲ್ಲಿರುವ ಶ್ರೀ ಭಂಡಾರಕೇರಿ ಮೂಲಮಠಕ್ಕೆ ಭೇಟಿ ನೀಡಿ ರಾಮದೇವರು ಗೋಪೀನಾಥ ದೇವರ ದರ್ಶನ ಪಡೆದು ಚಾತುರ್ಮಾಸ್ಯ ವ್ರತ ನಡೆಸುತ್ತಿರುವ ಶ್ರೀ ವಿದ್ಯೇಶತೀರ್ಥ ಶ್ರೀಪಾದರಿಗೆ ಗೌರವ ಸಮರ್ಪಿಸಿ ಸಮಾಲೋಚನೆ ನಡೆಸಿದರು‌‌. ಕೀರ್ತಿ ಶೇಷ ಶ್ರೀ ವಿಶ್ವೇಶತೀರ್ಥರು ತಮ್ಮ 8 ನೇ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದ ಬಳಿಕ‌ ಇದೇ ಮಠದಲ್ಲಿ ಕೆಲವರ್ಷಗಳ ಕಾಲ ಶ್ರೀ ವಿದ್ಯಾಮಾನ್ಯತೀರ್ಥರಿಂದ ಶಾಸ್ತ್ರಾಧ್ಯಯನ ನಡೆಸುವಾಗ ತಂಗುತ್ತಿದ್ದ ಕೊಠಡಿ ಹಾಗೂ ಮಠವನ್ನು ನೋಡಿ ಸಂತಸಗೊಂಡರು.