ಪಡಕುಡೂರು : ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಅಧಿಕಾರಿ ಪುತ್ಥಳಿ ಪ್ರತಿಷ್ಠಾಪನೆ : ಪ್ರಥಮ ವರ್ಷಾಚರಣೆ ಸಂಭ್ರಮ. – ಊರಿನ ಸಾಧಕರ ಸನ್ಮಾನ

0
90

ಪಡುಕುಡೂರು : ಎಂ.ಡಿ.ಅಧಿಕಾರಿ ಯೂತ್‌ ಕ್ಲಬ್‌ ಪಡುಕುಡೂರು ಮತ್ತು ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಪಡುಕುಡೂರುಬೀಡು ಎಂ.ಡಿ.ಅಧಿಕಾರಿ ಅವರ ಪುತ್ಥಳಿ ಲೋಕಾರ್ಪಣೆಯ ಪ್ರಥಮ ವರ್ಷದ ಸಂಭ್ರಮ ವಾರ್ಷಿಕೊತ್ಸವ ಕಾರ್ಯಕ್ರಮವು ಆಗಸ್ಟ್‌ ೧೫ರಂದು ನಡೆಯಲಿದೆ. ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಅಧಿಕಾರಿ ಪುತ್ಥಳಿಗೆ ಮಾಲಾರ್ಪಣೆಯ ಬಳಿಕ ಶಾಲೆಯಲ್ಲಿ ೭೯ನೇ ಸ್ವಾತಂತ್ರ್ಯ ದಿನಾಚರಣೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಸಭಾ ಕಾರ್ಯಕ್ರಮ, ಅಂಗನವಾಡಿ ಮತ್ತು ಪಡುಕುಡೂರು ಶಾಲೆಯ ಮಕ್ಕಳಿಂದ ನೃತ್ಯ ವೈವಿಧ್ಯ, ಸುಬ್ರಹ್ಮಣ್ಯ ಪ್ರಸಾದ್‌ ಮುದ್ರಾಡಿ ನಿರ್ದೇಶನದಲ್ಲಿ ಯಕ್ಷಗಾನ ” ರುಕ್ಮಿಣಿ ಕಲ್ಯಾಣ” ನಡೆಯಲಿದೆ. ಕಾರ್ಯಕ್ರಮದಲ್ಲಿ ಊರಿನ ಗಣ್ಯರು ಭಾಗವಹಿಸುವರು. ಪಡುಕುಡೂರಿನ ವಿವಿಧ ಕ್ಷೇತ್ರಗಳ ಸಾಧಕರಾದ ಹೈನುಗಾರಿಕೆಯಲ್ಲಿ ರವಿ ಶೆಟ್ಟಿ ಹೊಸಮನೆ, ತೋಟಗಾರಿಕೆಯಲ್ಲಿ ಉದಯ ಪೂಜಾರಿ ತಿಮ್ಮೋಟ್ಟು, ಭತ್ತ ಬೇಸಾಯದಲ್ಲಿ ಸುಮತಿ ಪೂಜಾರಿ ಕೌಂಟೆ, ಭತ್ತದ ಭಿತ್ತನೆಯಲ್ಲಿ ಭೋಜ ಪೂಜಾರಿ ಕುಂಜಳಿಗೆ, ಬೆಳ್ಳಿ ಶಿಲ್ಪಿ ನಾಗರಾಜ ಆಚಾರ್ಯ ಪಡುಕುಡೂರು, ಪಡುಕುಡೂರು ಗರಡಿ ಪೂಜಾರಿಯವರಾದ ಸುಂದರ ಪೂಜಾರಿ ಅವರಿಗೆ ಊರಿನ ಗೌರವ ಸಮರ್ಪಣೆ ನಡೆಯಲಿದೆ. ಕಳೆದ ಸಾಲಿನಲ್ಲಿ ಎಸ್‌ ಎಸ್‌ಎಲ್‌ ಸಿ ಪರೀಕ್ಷೆಯಲ್ಲಿ ೮೫ ಶೇಕಡಾ ಮತ್ತು ದ್ವಿತೀಯ ಪಿಯುಸಿಯಲ್ಲಿ ೯೦ ಶೇಕಡ ಅಂಕ ಪಡೆದ ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಹಿತ ಪ್ರತಿಭಾ ಪುರಸ್ಕಾರ ನಡೆಯಲಿದೆ. ವಿವಿಧ ಕ್ಷೇತ್ರದ ರಾಜ್ಯ ಮಟ್ಟದ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತದೆ ಎಂದು ಎಂ.ಡಿ.ಅಧಿಕಾರಿ ಯೂತ್‌ ಕ್ಲಬ್‌ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here