ಗೋಳ್ತಮಜಲ್ ಸರಕಾರಿ ಪ್ರೌಢಶಾಲೆಯಲ್ಲಿ ಕಲ್ಲಡ್ಕ ವಲಯ ಮಟ್ಟದ ಖೋ-ಖೋ ಪಂದ್ಯ

0
141

ಕಲ್ಲಡ್ಕ : ಮಕ್ಕಳ ಉತ್ತಮ ಆರೋಗ್ಯಕರ ಶರೀರಕ್ಕೆ ಕ್ರೀಡೆಗಳು ಸಹಕಾರಿಯಾಗಿದೆ ಎಂದು ಕಲ್ಲಡ್ಕ ವಲಯ ಕ್ರೀಡಾ ನೋಡಲ್ ಅಧಿಕಾರಿ ಜಗದೀಶ್ ಕೆ. ಹೇಳಿದರು.
ಅವರು ಬುಧವಾರ ಬಂಟ್ವಾಳ ತಾಲೂಕಿನ ಸರಕಾರಿ ಪ್ರೌಢಶಾಲೆ ಗೋಳ್ತಮಜಲ್ ಇಲ್ಲಿ ನಡೆದ ಕಲ್ಲಡ್ಕ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕಿಯರ ಖೋ -ಖೋ ಪಂದ್ಯಾಟ 2025 – 2026 ಕಾರ್ಯಕ್ರಮದಲ್ಲಿ ಈ ವರ್ಷ ನಡೆಯುವ ಪಂದ್ಯಾಟದ ನೀತಿ ನಿಯಮಗಳ ಬಗ್ಗೆ ತಿಳಿಹೇಳಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಚಂದ್ರಶೇಖರ್ ವಹಿಸಿದ್ದರು.

ಪಂದ್ಯಾಟದ ಪೂರ್ಣ ಪ್ರಾಯೋಜಕತ್ವವನ್ನು ವಹಿಸಿದ್ದ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ರಮೇಶ್ ನಾಯಕ ಗುಂಡೂರು ಮಾತನಾಡಿ, ಕ್ರೀಡಾಕೂಟದಲ್ಲಿ ಸೋಲು-ಗೆಲುವು ನಿಶ್ಚಿತ, ಗೆದ್ದವರು ಹಿಗ್ಗದೆ ಸೋತವರು ಕುಗ್ಗದೆ, ಆಟಗಾರರು ಕ್ರೀಡಾ ನಿಯಮಗಳನ್ನು ಮತ್ತು ತೀರ್ಪುಗಾರರ ನಿರ್ಣಯಗಳನ್ನು ಗೌರವಿಸಿ ಮನೋರಂಜನೆ ತರ ಅನುಭವಿಸಿ ಆಟ ಆಡಿ ಎಂದರು.

ಕಾರ್ಯಕ್ರಮದಲ್ಲಿ ಗೋಳ್ತಮಜಲ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಂತ್, ಗ್ರಾಮ ಪಂಚಾಯತ್ ಸದಸ್ಯರಾದ ಪುರುಷೋತ್ತಮ, ಕಲ್ಲಡ್ಕ ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿ, ಎಸ್.ಡಿ.ಎಂ.ಸಿ. ಶಿಕ್ಷಣ ತಜ್ಞ ನಾರಾಯಣ್ ಗೌಡ, ಎಸ್.ಡಿ.ಎಂ.ಸಿ. ಸದಸ್ಯರಾದ ಬಾಲಕೃಷ್ಣ, ನಾಗೇಶ್ ಪೂಜಾರಿ ,ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಇಂದುಶೇಖರ್, ನಿವೃತ್ತ ದೈಹಿಕ ಶಿಕ್ಷಕ ಶಂಕರ್, ಶಾಲೆಯ ದೈಹಿಕ ಶಿಕ್ಷಕ ಪ್ರಕಾಶ್ ಉಪಸ್ಥಿತರಿದ್ದರು.

ಶಾಲಾ ಮಕ್ಕಳು ಪ್ರಾರ್ಥಿಸಿ,ಮುಖ್ಯ ಶಿಕ್ಷಕಿ ಸುಜಾತ ಎಂ ಸ್ವಾಗತಿಸಿ ಹಿಂದಿ ಶಿಕ್ಷಕ ಶಂಕರ್ ವೆಂಕಪ್ಪ ಪಾವಸ್ಕರ್ ವಂದಿಸಿದರು. ಸಮಾಜ ಶಿಕ್ಷಕ ಸತ್ಯಶಂಕರ್ ಕಾರ್ಯಕ್ರಮ ನಿರೂಪಿಸಿದರು.

ನಂತರ ನಡೆದ ಪಂದ್ಯಾಟಗಳಲ್ಲಿ ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ತಂಡವು ಬಾಲಕ ಮತ್ತು ಬಾಲಕಿಯರ ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿತು. ಎರಡನೇ ಬಹುಮಾನವನ್ನು ಸರ್ಕಾರಿ ಪ್ರೌಢಶಾಲೆ, ಕಡೇಶಿವಾಲಯ ತಂಡವು ಪಡೆದುಕೊಂಡಿತು.

LEAVE A REPLY

Please enter your comment!
Please enter your name here