ಸಜೀಪ ಮುನ್ನೂರು: ನೇತ್ರಾವತಿ ಬಳಗ ಮಂಜಲ್ ಪಾದೆ ಸಜೀಪ ಮುನ್ನೂರು ಇದರ ಆಶ್ರಯದಲ್ಲಿ 12ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ ಉತ್ಸವ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಜ್ಯೋತಿ ಬೆಳಗುವ ಮೂಲಕ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿ ಜಗದೋದ್ಧಾರಕನಾದ ಶ್ರೀ ಕೃಷ್ಣನ ಅನುಗ್ರಹದಿಂದ ಎಲ್ಲರಿಗೂ ಸುಖ ಶಾಂತಿ ನೆಮ್ಮದಿ ಆಯುಷ್ಯ ಆರೋಗ್ಯ ಪ್ರಾಪ್ತಿಯಾಗಲಿ ಎಂಬುದಾಗಿ ಶುಭ ಹಾರೈಸಿದರು.
ನೇತ್ರಾವತಿ ಬಳಗದ ಅಧ್ಯಕ್ಷ ರಾಕೇಶ್, ಪಂಚಾಯತ್ ಸದಸ್ಯ ಸರೋಜಿನಿ, ಮಾಜಿ ಪಂಚಾಯತ್ ಸದಸ್ಯ ಪ್ರಮೀಳಾ ಗಟ್ಟಿ , ಪುರಂದರ ಕುಲಾಲ್, ಗಣೇಶ್ ಕುಲಾಲ್, ತಿಮ್ಮಪ್ಪಗಟ್ಟಿ ಮೊದಲಾದವರು ಉಪಸ್ಥಿತರಿದ್ದರು. ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.

